ಅ.15ರಂದು ಉಳ್ಳಾಲ ತಾಲೂಕು ಎರಡನೇ ಬ್ಯಾರಿ ಸಾಹಿತ್ಯ ಸಮ್ಮೇಳನ

ಸುದ್ದಿಗೋಷ್ಠಿಯಲ್ಲಿ ಉಳ್ಳಾಲ ತಾಲೂಕು ಎರಡನೇ ಬ್ಯಾರಿ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಉಳ್ಳಾಲ, ಅ.11: ಬ್ಯಾರಿ ಲೇಖಕರು ಮತ್ತು ಕಲಾವಿದರ ಕೂಟ ‘ಮೇಲ್ತೆನೆ’ಯ ವತಿಯಿಂದ ಅ.15ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್ ಕ್ಯಾಂಪಸ್ನಲ್ಲಿ ಉಳ್ಳಾಲ ತಾಲೂಕು ಎರಡನೇ ಬ್ಯಾರಿ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ನಝೀರ್ ಉಳ್ಳಾಲ್ ತಿಳಸಿದ್ದಾರೆ.
ಮಂಗಳವಾರ ದೇರಳಕಟ್ಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯವಾದಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಬೆಳಗ್ಗೆ 10ಕ್ಕೆ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸಸ್ನ ಅಧ್ಯಕ್ಷ ಹಾಜಿ ಯು.ಕೆ.ಕಣಚೂರು ಮೋನು ಉದ್ಘಾಟಿಸಲಿದ್ದಾರೆ.
ಸಮ್ಮೇಳನದ ವೇದಿಕೆಗೆ ಮರ್ಹೂಂ ಕುರಿಯ ಶೇಖ್ ಹಾಜಿ ಮತ್ತು ಸಮ್ಮೇಳನದ ದ್ವಾರಕ್ಕೆ ಹಿರಿಯ ಸಾಹಿತಿ ಮರ್ಹೂಂ ಯು.ಎ. ಕಾಸಿಂ ಉಳ್ಳಾಲ್ ಹೆಸರನ್ನಿಡಲಾಗಿದೆ. ಸಮ್ಮೇಳನದಲ್ಲಿ ಎರಡು ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಕವನ ಹಾಗೂ ಮೆಹಂದಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿವಿಧ ಕ್ಷೇತ್ರದ ನಾಲ್ವರು ಸಾಧಕರನ್ನು ಸನ್ಮಾನಿಸಲಾಗುವುದು. ಮೇಲ್ತೆನೆಯ ಬುಲೆಟಿನ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಪದ್ಮಶ್ರೀ ಹರೇಕಳ ಹಾಜಬ್ಬ, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ರಾಜೀವ್ ಗಾಂಧಿ ಆರೋಗ್ಯ ವಿವಿಯ ಮಾಜಿ ಸೆನೆಟ್ ಸದಸ್ಯ ಯು.ಟಿ. ಇಫ್ತಿಕಾರ್, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯೆ ಆಯಿಶಾ ಡಿ. ಅಬ್ಬಾಸ್, ದೇರಳಕಟ್ಟೆಯ ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಅಬೂಬಕರ್ ಹಾಜಿ ನಾಟೆಕಲ್, ಜೆಡಿಎಸ್ ಮುಖಂಡ ನಾಟೆಕಲ್ ಅಬೂಬಕರ್ ಹಾಜಿ, ಜಿಪಂ ಮಾಜಿ ಸದಸ್ಯ ಅಬ್ದುಲ್ ಅಝೀಝ್ ಮಲಾರ್, ಕೆಪಿಸಿಸಿ ಕೋ-ಆರ್ಡಿನೇಟರ್ ಫಾರೂಕ್ ಉಳ್ಳಾಲ್, ಉದ್ಯಮಿ ಡಾ ಕೆ.ಎಂ.ಮುನೀರ್ ಬಾವಾ, ಕಣಚೂರು ಪಿಯು ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಶಾಹಿದಾ ಬಿ.ಎಂ., ಕುನಿಲ್ ಪಬ್ಲಿಕ್ ಸ್ಕೂಲ್ನ ಉಪಾಧ್ಯಕ್ಷ ಪಿ.ಎಸ್.ಮೊಯ್ದಿನ್ ಕುಂಞಿ, ತಾಪಂ ಮಾಜಿ ಸದಸ್ಯ ಮುಸ್ತಫಾ ಪಾವೂರು, ಪಾವೂರು ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಅನ್ಸಾರ್ ಇನೋಳಿ, ಉದ್ಯಮಿ ಇಸ್ಮಾಯೀಲ್, ಸುನ್ನಿ ಸಂದೇಶದ ಪ್ರಕಾಶಕ ಮುಸ್ತಫಾ ಫೈಝಿ ಕಿನ್ಯ, ಸಿಪಿಎಂ ಮುಖಂಡ ರಫೀಕ್ ಹರೇಕಳ ಭಾಗವಹಿಸಲಿದ್ದಾರೆ.
ಯು.ಕೆ.ಖಾಲಿದ್ ಉಳ್ಳಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಬಶೀರ್ ಅಹ್ಮದ್ ಕಿನ್ಯ, ಝೈನುದ್ದೀನ್ ಇನೋಳಿ, ಇಸ್ಮಾಯೀಲ್ ಉಳ್ಳಾಲ, ಇಬ್ರಾಹೀಂ ನಡುಪದವು, ಹಮೀದ್ ಹಸನ್ ಮಾಡೂರು, ಎ.ಕೆ.ಮುಡಿಪು, ಎಡ್ವರ್ಡ್ ಲೋಬೋ, ಬಿ.ಎಂ.ಕಿನ್ಯ ಕವನ ವಾಚಿಸಲಿದ್ದಾರೆ.
ಸಿಹಾನಾ ಬಿ.ಎಂ. ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಆಯಿಶಾ ಯು.ಕೆ. ಉಳ್ಳಾಲ, ರುಕ್ಸಾನಾ ಉಮರ್ ಉಳ್ಳಾಲ, ರಮೀಝಾ ಎಂ.ಬಿ.ಮಂಜನಾಡಿ, ಶಿಫಾ ಕೆ.ಎಂ. ಉಳ್ಳಾಲ, ಸಾರಾ ಮಸ್ಕರುನ್ನಿಸಾ, ಆಯಿಶತ್ ಸಫ್ವಾನಾ ಉಳ್ಳಾಲ, ಹುದಾ ಅಕ್ಕರಕ್ಕೆರೆ ಕವನ ವಾಚಿಸಲಿದ್ದಾರೆ.
ಅಪರಾಹ್ನ 3ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸಸ್ನ ನಿರ್ದೇಶಕ ಅಬ್ದುಲ್ ರಹ್ಮಾನ್, ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್, ಪೀಠದ ಸಲಹಾ ಸಮಿತಿಯ ಸದಸ್ಯ ಹಾಜಿ ಇಬ್ರಾಹೀಂ ಕೋಡಿಜಾಲ್, ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್, ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ರಾಜ್ಯ ಆಹಾರ ಜಾಗೃತಿ ಸಮಿತಿಯ ಮಾಜಿ ನಿರ್ದೇಶಕ ಹಾಜಿ ಟಿ.ಎಸ್.ಅಬ್ದುಲ್ಲಾ ಸಾಮಣಿಗೆ, ಜೆಡಿಎಸ್ ರಾಜ್ಯ ಕಾರ್ಯದರ್ಶಿಗಳಾದ ಹೈದರ್ ಪರ್ತಿಪ್ಪಾಡಿ, ಅಬ್ದುಲ್ ಅಝೀಝ್ ಮೈಸೂರು ಬಾವ, ಬೆಳ್ಮ ಗ್ರಾಪಂ ಅಧ್ಯಕ್ಷ ಸಿ.ಎಂ.ಸತ್ತಾರ್, ಬ್ಯಾರಿ ಅಕಾಡಮಿಯ ಸದಸ್ಯ ಹೈದರಲಿ ಕೆ., ಉದ್ಯಮಿ ಎಸ್.ಕೆ. ಖಾದರ್ ಹಾಜಿ, ಜಿಪಂ ಮಾಜಿ ಸದಸ್ಯ ಎನ್.ಎಸ್.ಕರೀಂ, ಹಿರಿಯ ಪತ್ರಕರ್ತ ಡಿ.ಐ.ಅಬೂಬಕರ್ ಕೈರಂಗಳ, ಎಸ್ಸೆಸ್ಸೆಫ್ ರಾಷ್ಟ್ರೀಯ ಮುಖಂಡ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಎಸ್ಡಿಪಿಐ ಮುಖಂಡ ನೌಶಾದ್ ಕಲ್ಕಟ್ಟ, ಬ್ಯಾರಿ ಅಕಾಡಮಿಯ ರಿಜಿಸ್ಟ್ರಾರ್ ಮನೋಹರ್ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿವಿಧ ಕ್ಷೇತ್ರದ ಸಾಧಕರಾದ ಮುಹಮ್ಮದ್ ಅಲಿ ಉಚ್ಚಿಲ್, ಪಿ.ಕೆ. ಅಹ್ಮದ್ ಫಿಶ್ ಮೋನು, ಡಾ.ಮುಹಮ್ಮದ್ ಅಶ್ರಫ್, ಶಮೀಮಾ ಕುತ್ತಾರ್ ಅವರನ್ನು ಸನ್ಮಾನಿಸಲಾಗುವುದು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ಅಲಿಕುಂಞಿ ಪಾರೆ, ಸಿದ್ದೀಕ್ ತಲಪಾಡಿ, ಯು.ಕೆ. ಖಾಲಿದ್ ಉಳ್ಳಾಲ, ಇಸ್ಮಾಯಿಲ್ ಟಿ., ಹಂಝ ಮಲಾರ್, ಮನ್ಸೂರ್ ಅಹ್ಮದ್ ಸಾಮಣಿಗೆ, ಬಶೀರ್ ಕಲ್ಕಟ್ಟ, ಅಬ್ಬಾಸ್ ಉಚ್ಚಿಲ್, ನಝರ್ ಷಾ ಪಟ್ಟೋರಿ, ಅಬ್ದುಲ್ ರಝಾಕ್ ಶಾಲಿಮಾರ್, ಇಬ್ರಾಹಿಂ ನಡುಪದವು, ಸೋಶಿಯಲ್ ಫಾರೂಕ್, ಸಮದ್ ಕಿನ್ಯ, ಇಬ್ರಾಹಿಂ ಕುಂಞಿ ಪಾರೆ, ಸಿದ್ದೀಕ್ ಎಸ್.ರಾಝ್, ಆಸಿಫ್ ಬಬ್ಬುಕಟ್ಟೆ, ಅಬ್ದುಲ್ಲತೀಫ್ ಸಾಮಣಿಗೆ ಮತ್ತಿತರರು ಉಪಸ್ಥಿತರಿದ್ದರು







