ಬೆಂಗಳೂರು: ವಿದೇಶಿ ಪ್ರಜೆಯ ಕೊಲೆ
ಬೆಂಗಳೂರು, ಅ.11: ಮಹಿಳೆ ವಿಚಾರವಾಗಿ ಆಫ್ರಿಕನ್ ಪ್ರಜೆಯೊರ್ವ ತನ್ನದೇ ದೇಶದ ಪ್ರಜೆಯನ್ನು ಕೊಲೆಗೈದಿರುವ ಘಟನೆ ಇಲ್ಲಿನ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಫ್ರಿಕಾದ 36 ವರ್ಷದ ಆರಡಿ ಡೇವಿಡ್ ಕೊಲೆಯಾದ ವ್ಯಕ್ತಿಯಾಗಿದ್ದು, ಈತನನ್ನು ಕೊಲೆ ಮಾಡಿರುವ ಆರೋಪದಡಿ ಆಫ್ರಿಕಾ ಮೂಲದ ವಿಕ್ಟರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವಿಕ್ಟರ್ಗೆ ಪರಿಚಯ ಇದ್ದ ಮಹಿಳೆಯೊಬ್ಬಕೆಯ ಜತೆ ದೈಹಿಕ ಸಂಪರ್ಕ ಕುರಿತು ಡೇವಿಡ್ ನಡುವೆ ಜಗಳವಾಗಿದ್ದು, ಸೋಮವಾರ ಸಂಜೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ದಾಸರಹಳ್ಳಿಯ ಮುನಿಕೆಂಪಣ್ಣ ಬಡಾವಣೆಯ ರಸ್ತೆಯಲ್ಲಿ ಡೇವಿಡ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
Next Story