ಅ.25ರ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ

ಫೈಲ್ ಫೋಟೊ
ಉಡುಪಿ, ಅ.11: ಈ ಬಾರಿ ಅ.5ರ ದೀಪಾವಳಿ ಅಮಾವಾಸ್ಯೆಯಂದು ಮಧ್ಯಾಹ್ನ 2:30ರಿಂದ ಸಂಜೆ ಸೂರ್ಯಾಸ್ತ ಮಾನದವರೆಗೆ ನಡೆಯಲಿರುವ ಗ್ರಸ್ತಾಸ್ತ ಸೂರ್ಯಗ್ರಹಣ ವೀಕ್ಷಣೆಗೆ ಪರ್ಕಳ ಪಾಟೀಲ್ ಕ್ಲೋತ್ ಸ್ಟೋರಿನ ಬಳಿ ಸಕಲ ಸಿದ್ಧತೆ ನಡೆಸಲಾಗಿದೆ.
ಮಣಿಪಾಲದ ಎಂಐಟಿ ಉದ್ಯೋಗಿ ಪ್ರೊ.ಆರ್.ಮನೋಹರ್ ಅವರ ಆವಿಷ್ಕರಣೆ ಮಾಡಿದ ಟೆಲಿಸ್ಕೋಪ್ ಮೂಲಕ ಹಾಗೂ ಸರಳೇಬೆಟ್ಟು ಸುಹಾಸ್ ಶೆಣೈ ತಮ್ಮ ಕೈಚಳಕದಲ್ಲಿ ಕ್ಯಾಮರಾದಲ್ಲಿ ಸೆರೆ ಹಿಡಿದು ಕ್ಷಣ ಕ್ಷಣದಲ್ಲಿ ವಿಭಿನ್ನಯ ವಿನ್ಯಾಸದೊಂದಿಗೆ ಲ್ಯಾಪ್ಟಾಪ್ ಮೂಲಕ ತೋರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮ ಸಂಘಟಕರಾದ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ಜಯ ಶೆಟ್ಟಿ ಬನ್ನಂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





