ಬಂಟ್ವಾಳ: ಅತ್ಯಾಚಾರ ಯತ್ನ ಪ್ರಕರಣ; ಆರೋಪಿ ಸೆರೆ

ಬಂಟ್ವಾಳ, ಅ.11: ಪುಣಚ ಗ್ರಾಮ ಪಂಚಾಯತ್ ಸಿಬ್ಬಂದಿಯೋರ್ವ ಪಂಚಾಯತ್ ಗೆ ಆಗಮಿಸಿದ ಯುವತಿಯ ಕೈ ಹಿಡಿದೆಳೆದು ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುಣಚ ಗ್ರಾಮ ಪಂಚಾಯತ್ ಸಿಬ್ಬಂದಿ ಉಸ್ಮಾನ್ (53) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಪಂಚಾಯತ್ ಗೆ ಬಂದಿದ್ದ ಯುವತಿಯ ಕೈ ಹಿಡಿದು ಎಳೆದಿರುವುದಾಗಿ ಆರೋಪಿಸಿ ವಿಟ್ಲ ಠಾಣೆಗೆ ಯುವತಿ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Next Story





