BJP ಜನ ಸಂಕಲ್ಪ ಯಾತ್ರೆ: ಜನತೆಗೆ ಉತ್ತರಿಸುವಂತೆ ಸಿಎಂ ಬೊಮ್ಮಾಯಿಗೆ 10 ಪ್ರಶ್ನೆ ಮುಂದಿಟ್ಟ ಸುರ್ಜೇವಾಲಾ
ಬೆಂಗಳೂರು, ಅ.11: ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸುತ್ತಿರುವ ಜನಸಾಗರ ನೋಡಿ ಭಯಭೀತರಾಗಿರುವ ಬೊಮ್ಮಾಯಿ-ಯಡಿಯೂರಪ್ಪ ಜೋಡಿ ಇಂದಿನಿಂದ ‘ಪ್ಲೇನ್-ಹೆಲಿಕಾಪ್ಟರ್’ ಯಾತ್ರೆಯನ್ನು ಆರಂಭಿಸಿದೆ. ಆದರೆ ಮೊದಲು ನೀವು ಕರ್ನಾಟಕದ ಜನತೆಗೆ ಉತ್ತರಿಸಬೇಕಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮೂಲಕ 10 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
1) ಯಡಿಯೂರಪ್ಪ ಅವರನ್ನು ಸಿಎಂ ಸೀಟಿನಿಂದ ಕೆಳಗಿಳಿಸಲು ಭ್ರಷ್ಟಾಚಾರ ಆರೋಪ ಕಾರಣವೇ? ಬಿಎಸ್ವೈ ವಿರುದ್ಧ ಲೋಕಾಯುಕ್ತದಲ್ಲಿ ಈಗ ಎಫ್ಐಆರ್ ದಾಖಲಾಗಲಿದೆಯೇ?
2) ಬಿಜೆಪಿ ಸರಕಾರ ಎಂದರೆ ನಲವತ್ತು ಪಸೆರ್ಂಟ್ ಸರಕಾರ ಎಂದು ರಾಷ್ಟ್ರಾ ದ್ಯಂತ ಹೆಸರುವಾಸಿಯಾಗಿದೆಯೇ ?, 3) ಪ್ರತಿಯೊಬ್ಬರ ಬಾಯಲ್ಲೂ ಪೇಸಿಎಂ ಎಂಬ ಪದ ಹರಿದಾಡುತ್ತಿದೆ. ಯಾಕೆ?, 4) ನಲವತ್ತು ಪಸೆರ್ಂಟ್ ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರ ಸಂಘದ ಮೇಲೆ ಯಾಕೆ ನೀವು ಕ್ರಮ ಕೈಗೊಳ್ಳಲಿಲ್ಲ?
5) ನಲವತ್ತು ಪರ್ಸೆಂಟ್ ಕಮಿಷನ್ ಆರೋಪ ಮಾಡಿದ 13 ಸಾವಿರ ಖಾಸಗಿ ಶಾಲೆಗಳ ಸಂಘದ ಮೇಲೆ ಯಾಕೆ ಕ್ರಮ ಕೈಗೊಳ್ಳಲಿಲ್ಲ?
6) ಹಲವು ಮಠದ ಸ್ವಾಮೀಜಿಗಳೂ ನಿಮ್ಮ ವಿರುದ್ಧ ನಲವತ್ತು ಪರ್ಸೆಂಟ್ ಆರೋಪ ಮಾಡಿದ್ದು ಯಾಕೆ?
7) 40 ಪರ್ಸೆಂಟ್ ಪ್ರಕರಣದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ರನ್ನು ಹತ್ಯೆಗೈದವರಿಗೆ ನೀವು ಕ್ಲೀನ್ ಚಿಟ್ ಕೊಟ್ಟಿದ್ದು ಯಾಕೆ?
8) ನಿಮ್ಮ ಸ್ವಂತ ಶಾಸಕರೇ ಕರ್ನಾಟಕ ಬಿಜೆಪಿ ಸರಕಾರ ಅತ್ಯಂತ ಭ್ರಷ್ಟ ಸರಕಾರ ಎಂದು ಆರೋಪಿಸುತ್ತಿದ್ದಾರೆ?
9) ನಿಮ್ಮ ಪಕ್ಷದ ಶಾಸಕರೇ ‘ಸಿಎಂ ಪೋಸ್ಟ್ 2500 ಕೋಟಿಗೆ ಮಾರಾಟಕ್ಕಿದೆ’ ಎಂದು ಹೇಳಿದ್ದಾರೆ?
10) ನಿಮ್ಮ ಸ್ವಪಕ್ಷದ ಸಚಿವರೇ ‘ಕರ್ನಾಟಕದಲ್ಲಿ ಸರಕಾರ ಇಲ್ಲ. ಕೇವಲ ಟೈಮ್ ಪಾಸ್ ಮಾಡಲಾಗುತ್ತಿದೆ’ ಎಂದು ಹೇಳಿದ್ದು ಸುಳ್ಳೇ? ಎಂದು ಸುರ್ಜೇವಾಲ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಬೊಮ್ಮಾಯಿಯವರೇ, ಸರಳ ಸತ್ಯ ಏನೆಂದರೆ, ರಾಜ್ಯದ ಅಭಿವೃದ್ಧಿಯ ಬಗ್ಗೆ ನಿಮ್ಮ ಮುನ್ನೋಟ ಶೂನ್ಯ, ಭಾರತದಲ್ಲೆ ಅತ್ಯಂತ ಭ್ರಷ್ಟ ಸರಕಾರದ ಮುಂದಾಳು ಎಂದು ಹೆಸರು ಪಡೆದಿದ್ದೀರಿ. ನಿಮ್ಮ ಅಪೂರ್ಣತೆ ಚರಿತ್ರೆಯಾಗುತ್ತಿದೆ, ನಿಮ್ಮ ದುರಾಡಳಿತ ಉದಾಹರಣೀಯ. ಜನತೆಯನ್ನು ಮೋಸಗೊಳಿಸುವುದು ನಿಲ್ಲಿಸಿ, ಜನತೆ ನಿಮ್ಮನ್ನು ಸೋಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Will CM Bommai answer#40PercentSarkara#PayCM pic.twitter.com/KnXkMllPtI
— Randeep Singh Surjewala (@rssurjewala) October 11, 2022