'ಹೇ ದೋಸ್ತಿ ಹಮ್ ನಹೀ ಚೋಡೆಂಗೆ': ಸಿದ್ದರಾಮಯ್ಯ- ಡಿಕೆಶಿ ಫೋಟೊ ಹಂಚಿಕೊಂಡ ಸುರ್ಜೆವಾಲಾ
![ಹೇ ದೋಸ್ತಿ ಹಮ್ ನಹೀ ಚೋಡೆಂಗೆ: ಸಿದ್ದರಾಮಯ್ಯ- ಡಿಕೆಶಿ ಫೋಟೊ ಹಂಚಿಕೊಂಡ ಸುರ್ಜೆವಾಲಾ ಹೇ ದೋಸ್ತಿ ಹಮ್ ನಹೀ ಚೋಡೆಂಗೆ: ಸಿದ್ದರಾಮಯ್ಯ- ಡಿಕೆಶಿ ಫೋಟೊ ಹಂಚಿಕೊಂಡ ಸುರ್ಜೆವಾಲಾ](https://www.varthabharati.in/sites/default/files/images/articles/2022/10/12/352696-1665560219.jpg)
ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೊ' ಯಾತ್ರೆ ರಾಜ್ಯದಲ್ಲಿ 11ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಿಂದ ಆರಂಭವಾಗಿದೆ.
ಪಾದಯಾತ್ರೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಹಲವು ಮಂದಿ ನಾಯಕರು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ಮನೆ ತೆರವಿಗೆ ವಿರೋಧ: ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ದಂಪತಿ
ಇನ್ನು ಪಾದಯಾತ್ರೆ ವೇಳೆ ವಿಶ್ರಾಂತಿ ಪಡೆಯುತ್ತಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಒಟ್ಟಿಗೆ ಕುಳಿತುಕೊಂಡಿರುವ ಫೋಟೊ ಒಂದನ್ನು ಹಂಚಿಕೊಂಡಿರುವ ರಣದೀಪ್ ಸಿಂಗ್ ಸುರ್ಜೆವಾಲಾ, 'ಹೇ ದೋಸ್ತಿ ಹಮ್ ನಹೀ ಚೋಡೆಂಗೆ' ಎಂದು ಬರೆದುಕೊಂಡಿದ್ದಾರೆ.
The bonhomie & camaraderie !
— Randeep Singh Surjewala (@rssurjewala) October 12, 2022
ये दोस्ती हम नहीं छोड़ेंगे….#BharatJodoYatra#BharatAikyateYatre pic.twitter.com/5TAYBmsyRG