'ಭಾರತ್ ಜೋಡೊ' ಯಾತ್ರೆ ಬಿಜೆಪಿಯ ಯಂಕ-ಸೀನಾ-ನಾಣಿಗಳ ಎದೆ ನಡುಗಿಸಿದೆ: ದಿನೇಶ್ ಗುಂಡೂರಾವ್

ಬೆಂಗಳೂರು: 'ರಾಜ್ಯ BJPಯ BSY, ಬೊಮ್ಮಾಯಿ & ಕಟೀಲ್ 'ಯಂಕ-ಸೀನಾ-ನಾಣಿ'ಯಂತೆ ಜನಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. ಭಾರತ ಐಕ್ಯತಾ ಯಾತ್ರೆ ಈ ಯಂಕ-ಸೀನಾ-ನಾಣಿಗಳ ಎದೆ ನಡುಗಿಸಿದೆ. ಹಾಗಾಗಿಯೇ ಜನಸಂಕಲ್ಪ ಯಾತ್ರೆ ಎಂಬ ನಾಟಕದ ಥೇರು ಎಳೆಯುತ್ತಿದ್ದಾರೆ' ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, '' ಭಾರತ ಐಕ್ಯತಾ ಯಾತ್ರೆಯ ಉದ್ದೇಶ ಸಾಮರಸ್ಯ. ಯಂಕ-ಸೀನಾ-ನಾಣಿಗಳ ಜನಸಂಕಲ್ಪ ಯಾತ್ರೆಯ ಉದ್ದೇಶವೇನು.?'' ಎಂದು ಪ್ರಶ್ನೆ ಮಾಡಿದ್ದಾರೆ.
''BJPಯವರು ಕಳೆದ ತಿಂಗಳು ದೊಡ್ಡಬಳ್ಳಾಪುರದಲ್ಲಿ ನಡೆಸಿದ ಸಾಧನಾ ಸಮಾವೇಶಕ್ಕೆ ಜನರಿಲ್ಲದೆ ತೋಪೆದ್ದು ಹೋಯಿತು. ಈಗ ಯಾವ ಮುಖ ಇಟ್ಟುಕೊಂಡು BJPಯವರು ಯಂಕ-ಸೀನಾ-ನಾಣಿ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ.? ಇದು 40% ಕಮೀಷನ್ 50% ಪರ್ಸೆಂಟ್ ಏರಿಸುವ ಸಂಕಲ್ಪದ ಯಾತ್ರೆಯೇ? ಅಥವಾ ರಾಜ್ಯವನ್ನು ಭ್ರಷ್ಟಾಚಾರದಲ್ಲಿ ನಂ.1 ಮಾಡುವ ಸಂಕಲ್ಪ ಯಾತ್ರೆಯೇ?''
''2018 ರ ಪ್ರಣಾಳಿಕೆಯಲ್ಲಿ BJP 600 ಕ್ಕೂ ಹೆಚ್ಚು ಆಶ್ವಾಸನೆ ನೀಡಿ, ಅದನ್ನು ಈಡೇರಿಸುವ ಸಂಕಲ್ಪ ಮಾಡಿತ್ತು. ಆ ಸಂಕಲ್ಪ ಏನಾಯ್ತು.? ಪ್ರಣಾಳಿಕೆ ಈಡೇರಿಸುವ ಸಂಕಲ್ಪ ಹಳ್ಳ ಹಿಡಿದಿದೆ. ಈಗ ಜನಸಂಕಲ್ಪ ಯಾತ್ರೆ ಎಂಬ ಹೊಸ ನಾಟಕ ಯಾಕೆ.? ಇದು ಕಾಂಗ್ರೆಸ್‌ನ ಐಕ್ಯತಾ ಯಾತ್ರೆಯ ಯಶಸ್ಸಿನಿಂದ ಕಂಗೆಟ್ಟು ಮಾಡುತ್ತಿರುವ ಯಾತ್ರೆಯಲ್ಲವೆ.?'' ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.
2
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 12, 2022
BJP ಕಳೆದ ತಿಂಗಳು ದೊಡ್ಡಬಳ್ಳಾಪುರದಲ್ಲಿ ನಡೆಸಿದ ಸಾಧನಾ ಸಮಾವೇಶ ಜನರಿಲ್ಲದೆ ತೋಪೆದ್ದು ಹೋಯಿತು.
ಈಗ ಯಾವ ಮುಖ ಇಟ್ಟುಕೊಂಡು BJPಯವರು ಯಂಕ-ಸೀನಾ-ನಾಣಿ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ?
ಇದು 40% ಕಮೀಷನ್ 50% ಪರ್ಸೆಂಟ್ ಏರಿಸುವ ಸಂಕಲ್ಪದ ಯಾತ್ರೆಯೇ?
ಅಥವಾ ರಾಜ್ಯವನ್ನು ಭ್ರಷ್ಟಾಚಾರದಲ್ಲಿ ನಂ.1 ಮಾಡುವ ಯಾತ್ರೆಯೇ?