ಗೋವಾ: ನೌಕಾಪಡೆಯ MiG-29K ಫೈಟರ್ ಜೆಟ್ ಪತನ

Photo: Twitter/@Robert_Aabraham
ಪಣಜಿ: ಭಾರತೀಯ ನೌಕಾಪಡೆಯ MiG-29K ಯುದ್ಧವಿಮಾನವು ಬುಧವಾರ ಗೋವಾ ಕರಾವಳಿಯಲ್ಲಿ ಪತನಗೊಂಡಿತು.
ಪೈಲಟ್ ಸುರಕ್ಷಿತವಾಗಿ ವಿಮಾನದಿಂದ ಹೊರಬಂದಿದ್ದು, ಪೈಲಟ್ ಸ್ಥಿತಿ ಸ್ಥಿರವಾಗಿದೆ ಎಂದು ನೌಕಾಪಡೆ ತಿಳಿಸಿದೆ.
ವಿಮಾನವು ನೌಕಾ ನೆಲೆಗೆ ಮರಳುವ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಅಪಘಾತದ ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ.
Next Story





