ಉಡುಪಿ: ಅ.15ರಂದು ʼಗಾಂಧಿ ಕಥನ- ಒಂದು ಮುಖಾಮುಖಿʼ ಕಾರ್ಯಕ್ರಮ

ಉಡುಪಿ, ಅ.12: ಉಡುಪಿಯ ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು ಆಶ್ರಯದಲ್ಲಿ ಅ.15ರ ಶನಿವಾರ ಸಂಜೆ 4.30ಕ್ಕೆ ಉಡುಪಿ ಎಂ.ಜಿ.ಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ, ಡಿ.ಎಸ್.ನಾಗಭೂಷಣ ಅವರ ‘ಗಾಂಧಿ ಕಥನ - ಒಂದು ಮುಖಾಮುಖಿ’ ಕೃತಿಯ ಕುರಿತು ಕಾರ್ಯಕ್ರಮವೊಂದು ಆಯೋಜಿತವಾಗಿದ್ದು, ಇದರಲ್ಲಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ಜಯಪ್ರಕಾಶ್ ಶೆಟ್ಟಿ ಎಚ್. ಇವರೊಂದಿಗೆ ಮುಖಾಮುಖಿ ನಡೆಯಲಿದೆ.
ಆಸಕ್ತರು ಭಾಗವಹಿಸುವಂತೆ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





