ಅ.15ರಂದು ವಿವಿದೆಡೆ ವಿದ್ಯುತ್ ಅದಾಲತ್

ಉಡುಪಿ, ಅ.12: ಮೆಸ್ಕಾಂನ ವತಿಯಿಂದ ಅಕ್ಟೋಬರ್ ೧೫ರ ಶನಿವಾರ ದಂದು ಉಡುಪಿ ತಾಲೂಕಿನ ಪೆಣರ್ಂಕಿಲ ಗ್ರಾಮ, ಕಾಪು ತಾಲೂಕಿನ ಮಜೂರು ಗ್ರಾಮ, ಬ್ರಹ್ಮಾವರ ತಾಲೂಕಿನ ಹಂದಾಡಿ ಗ್ರಾಮ, ಕುಂದಾಪುರ ತಾಲೂಕಿನ ಕಮಲಶಿಲೆ, ಬೇಳೂರು ಹಾಗೂ ಕೆರಾಡಿ ಗ್ರಾಮ, ಬೈಂದೂರು ತಾಲೂಕಿನ ಹೇರೂರು ಗ್ರಾಮ ಹಾಗೂ ಕಾರ್ಕಳ ತಾಲೂಕಿನ ಮರ್ಣೆ, ಈದು ಮತ್ತು ನಿಟ್ಟೆ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ನಡೆಯಲಿವೆ. ಮೆಸ್ಕಾಂನ ಹಿರಿಯ ಅಧಿಕಾರಿಗಳು ಈ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಲಿದ್ದು, ಗ್ರಾಹಕರು ತಮ್ಮ ಸಮಸ್ಯೆಗಳನ್ನು ಅದಾಲತ್ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





