ಜಮೀಯ್ಯತುಲ್ ಫಲಾಹ್‌ನಿಂದ ವಿದ್ಯಾರ್ಥಿ ಧನುಷ್ ಮನೆಗೆ ಸೋಲಾರ್ ಕೊಡುಗೆ

ಕುಂದಾಪುರ, ಅ.12: ಜಮೀಯ್ಯತುಲ್ ಫಲಾಹ್ ಕುಂದಾಪುರ ತಾಲೂಕು ಘಟಕದ ವತಿಯಿಂದ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಧನುಷ್ ಮನೆಗೆ ಸೋಲಾರ್ ದೀಪವನ್ನು ಅಳವಡಿಸಲಾಯಿತು.
ರಾತ್ರಿ ಸಮಯದಲ್ಲಿ ಓದಲು ಬರೆಯಲು ತುಂಬಾ ಕಷ್ಟವಾಗಿ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗುತ್ತಿದೆ ಎಂಬ ವಿದ್ಯಾರ್ಥಿಯ ಮನವಿಗೆ ಸ್ಪಂದಿಸಿದ ಎಸ್‌ಡಿಎಂಸಿ ಸಮನ್ವಯ ವೇದಿಕೆಯು ಜಮೀಯ್ಯತುಲ್ ಫಲಾಹ್ ಕುಂದಾ ಪುರ ತಾಲೂಕು ಘಟಕದ ಮೂಲಕ ಸೋಲಾರ್ ದೀಪ ಕೊಡುಗೆಯಾಗಿ ನೀಡುವಂತೆ ಮಾಡಿತು.
ಮನೆಗೆ ಅಳವಡಿಸಲಾದ ಸೋಲಾರ್ ದೀಪವನ್ನು ಘಟಕದ ಅಧ್ಯಕ್ಷ ಮುಜಾವರ ಅಬು ಮೊಹಮ್ಮದ್ ಉದ್ಘಾಟಿಸಿದರು. ಕಾರ್ಯದರ್ಶಿ ಶೇಕ್ ಅಬು ಮೊಹಮ್ಮದ್, ಕೋಶಾಧಿಕಾರಿ ಅಬ್ದುಲ್ ಸಲಾಂ ಚಿತ್ತೂರು, ಸದಸ್ಯರಾದ ಜಿ.ಎಂ.ಅಬ್ದುಲ್ ಅಝೀಝ್, ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಎಸ್.ವಿ.ನಾಗರಾಜ್ ಉಪಸ್ಥಿತರಿದ್ದರು.
Next Story





