ಹಣದ ಅಡಚಣೆಯಿಂದ ಆತ್ಮಹತ್ಯೆ

ಕುಂದಾಪುರ, ಅ.12: ಪಕ್ಷವಾತ ಖಾಯಿಲೆಯಿಂದ ಬಳಲುತ್ತಿದ್ದ ವಡೇರ ಹೋಬಳಿಯ ವಿಠಲ್ವಾಡಿ ನಿವಾಸಿ ನರಸಿಂಹ(53) ಎಂಬವರು ಹಣದ ಅಡಚಣೆಯಿಂದ ಮನನೊಂದು ಅ.10ರಂದು ಮಧ್ಯಾಹ್ನ ಕಾಳಾವಾರದ ಸುಬ್ರಹ್ನಣ್ಯ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿರುವ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





