Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಅ.25, ನ.8ರಂದು ಎರಡು ಅಪರೂಪದ ಗ್ರಹಣಗಳು

ಅ.25, ನ.8ರಂದು ಎರಡು ಅಪರೂಪದ ಗ್ರಹಣಗಳು

ವಾರ್ತಾಭಾರತಿವಾರ್ತಾಭಾರತಿ12 Oct 2022 9:39 PM IST
share
ಅ.25, ನ.8ರಂದು ಎರಡು ಅಪರೂಪದ ಗ್ರಹಣಗಳು

ಉಡುಪಿ, ಅ.12: ಈ ವರ್ಷ ದೀಪಾವಳಿ ಅಮಾವಾಸ್ಯೆಯಂದು (ಅ.25) ಪಾರ್ಶ್ವಸೂರ್ಯ ಗ್ರಹಣ ಹಾಗೂ ಕಾರ್ತೀಕದ ಹುಣ್ಣಿಮೆಗೊಂಡು (ನ.8) ಪಾರ್ಶ್ವ ಚಂದ್ರಗ್ರಹಣ. ಈ ಗ್ರಹಣಗಳು ಭಾರತಕ್ಕೆ ಪಾರ್ಶ್ವ ಗ್ರಹಣಗಳಾದರೂ ಈ ಎರಡೂ ಗ್ರಹಣಗಳು ಬಲು ಅಪರೂಪ. ಏಕೆಂದರೆ ಸೂರ್ಯ ಗ್ರಹಣ ಸೂರ್ಯಾಸ್ತಕ್ಕೆ, ಚಂದ್ರ ಗ್ರಹಣ ಚಂದ್ರ ಉದಯಕ್ಕೆ. ಇದೇ ಈ ಗ್ರಹಣಗಳ ವಿಶೇಷ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಖಭೌತವಿಜ್ಞಾನಿ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಅ.25ರ ಪಾರ್ಶ್ವ ಸೂರ್ಯಗ್ರಹಣ: ಸಂಜೆ 5:08ಕ್ಕೆ ಪ್ರಾರಂಭಗೊಂಡು 6:29ಕ್ಕೆ ಅಂತ್ಯವಾಗಲಿದೆ. 5:50ಕ್ಕೆ ಅತ್ಯಂತ ಹೆಚ್ಚೆಂದರೆ 22 ಅಂಶ ಕಾಣಲಿದೆ. ರಾಜಧಾನಿ ದಿಲ್ಲಿಯವರಿಗೆ ಅತ್ಯಧಿಕ 55 ಅಂಶ ಗ್ರಹಣ ಕಾಣಿಸಲಿದೆ. ಉಡುಪಿಯಲ್ಲಿ ಆದಿನದ ಸೂರ್ಯಾಸ್ತ 6:06ಕ್ಕೆ ಆಗುವುದರಿಂದ ಗ್ರಹಣದ ಸೂರ್ಯ ಕಣ್ಣು ಮಿಣುಕಿಸುವಂತೆ ಗ್ರಹಣದೊಂದಿಗೆ ಅಸ್ತಂಗತನಾಗುವನು. ಅದೊಂದು ರೋಚಕ ಸನ್ನಿವೇಶವಾಗಿರುತ್ತದೆ.

ಆದರೆ ಸೂರ್ಯಗ್ರಹಣವನ್ನು ಬರೆ ಕಣ್ಣಿಂದ ನೋಡಬಾರದು. ಗ್ರಹಣದ ಕನ್ನಡಕಗಳ ಮೂಲಕವೇ ನೋಡಬಹುದು. ಈ ಗ್ರಹಣಗಳ, ಅವುಗಳ ಕಾಲ ನಿರ್ಣಯ ಅನಾದಿ ಕಾಲದಿಂದ ಖಗೋಳಾಸಕ್ತರಿಗೊಂಡು ಸವಾಲೇ. ಅವರ ಸಿದ್ಧಾಂತಗಳ ಸತ್ಯಾಸತ್ಯತೆಗೆ ಮಾನದಂಡ.

ನ.8ರ ಪಾರ್ಶ್ವ ಚಂದ್ರಗ್ರಹಣ: ಹುಣ್ಣಿಮೆಯ ಚಂದ್ರ ಉದಯಿಸುವಾಗಲೇ 6ಕ್ಕೆ ಪಾರ್ಶ್ವಚಂದ್ರಗ್ರಹಣ. ಅದೂ ಬರೇ 19 ನಿಮಿಷ ಮಾತ್ರ. ಸಂಜೆ 6:19ಕ್ಕೆ ಗ್ರಹಣ ಮುಗಿದಿರುತ್ತದೆ. ಕಣ್ಣು ಮಿಣಕಿಸುವಂತೆ ಗ್ರಹಣದ ಚಂದ್ರನ ಉದಯ ನೋಡಲು ಬಲು ಚಂದ. ಬರೇ ಕಣ್ಣಿಂದಲೇ ಇದನ್ನು ನೋಡಬಹುದು. ಈ ಗ್ರಹಣ ಅಪರಾಹ್ನ 2:39ಕ್ಕೆ ಪ್ರಾರಂಭ. ಖಗ್ರಾಸ 3:46ಕ್ಕೆ. ಖಗ್ರಾಸ ಅಂತ್ಯ ಸಂಜೆ 5:11ಕ್ಕೆ. ಪಾರ್ಶ್ವ ಅಂತ್ಯ 6:19ಕ್ಕೆ. ನಮಗೆ ಈ ಗ್ರಹಣದ ಅಂತ್ಯದಲ್ಲಿ ಕೇವಲ 19 ನಿಮಿಷ ಮಾತ್ರ ಲಭ್ಯ. ಅದೂ ಚಂದ್ರೋದಯದಲ್ಲಿ ಮಾತ್ರ.

ಗ್ರಹಣಗಳು ನಮಗೆ ಅಪರೂಪವೇನಲ್ಲ. ಪ್ರತಿ ಆರು ತಿಂಗಳಿಗೊಮ್ಮೆ ನಡೆಯುತ್ತಿರುತ್ತವೆ. ಇದರಲ್ಲಿ ಸೂರ್ಯಗ್ರಹಣ ವಾದರೆ ಭೂಮಿಯ ಕೆಲವೇ ಪ್ರದೇಶಗಳಿಗೆ ಸೀಮಿತ. ಚಂದ್ರ ಗ್ರಹಣ ಅರ್ಧ ಭೂಮಿಗೆ ಗೋಚರಿಸಬಹುದು. ಪ್ರಖ್ಯಾತ ಖಗೋಳ ಶಾಸ್ತ್ರಜ್ಞ ಪುಣೆಯ ಪ್ರೊ.ಜಯಂತ್ ವಿ.ನಾರ್ಲೀಕರ್ ತಮ್ಮ ‘ಸೆವೆನ್ ವಂಡರ್ಸ್‌ ಆಫ್ ಕಾಸ್ಮಸ್’ ಪುಸ್ತಕದಲ್ಲಿ ಭೂಮಿಯಲ್ಲಿ ನಡೆಯುವ ಈ ಗ್ರಹಣಗಳು ಒಂದು ವಿಸ್ಮಯ ಎನ್ನುತ್ತಾರೆ. ಈ ವಿಸ್ಮಯಗಳಿಗೆ ಅನೇಕ ಕಾರಣಗಳಿವೆ. ಸೂರ್ಯನಿಂದ ಭೂಮಿ ಹಾಗೂ ಚಂದ್ರರ ದೂರಗಳ ಅನುಪಾತ ಹಾಗೂ ಚಂದ್ರ ಮತ್ತು ಸೂರ್ಯನ ವ್ಯಾಸಗಳ ಅನುಪಾತ.

ಇವೆರಡೂ ಸಮವಾಗಿರುವುದರಿಂದ ನಮಗೆ ಸೂರ್ಯ ಮತ್ತು ಚಂದ್ರರು ಒಂದೇ ಗಾತ್ರದಲ್ಲಿರುವಂತೆ ಭಾಸವಾಗುತ್ತದೆ. ಸೂರ್ಯ ಭೂಮಿಯ ಪಥಗಳ ಸಮತಲ ಸುಮಾರು 5ಡಿಗ್ರಿ ಓರೆಯಾಗಿದೆ. ಈ ಸಮತಲಗಳು ಸಂಧಿಸುವಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಸೂರ್ಯ, ಚಂದ್ರ ಹಾಗೂ ಭೂಮಿ ನೇರ ಬರುವುದರಿಂದ ಈ ಗ್ರಹಣವೆಂಬ ನೆರಳು ಬೆಳಕಿನಾಟ ನಡೆಯುತ್ತಿರುತ್ತದೆ. ವಿಶ್ವದ ಬೇರೆ ಯಾವ ಗ್ರಹಗಳಲ್ಲಿ ಗ್ರಹಣಗಳ ಈ ವಿಸ್ಮಯ ನಡೆಯುವುದಿಲ್ಲ.

ಅಕಾಶದಲ್ಲಿ ನಡೆಯುವ ಈ ಖಗೋಳ ಪ್ರಯೋಗ ಅದೆಷ್ಟು ದೂರದಲ್ಲಿ ನಡೆಯುತ್ತದೆ ಎಂಬುದನ್ನು ಕೇಳಿದರೆ ಆಶ್ಚರ್ಯವಾಗಬಹುದು. ಭೂಮಿ ಚಂದ್ರರ ಸರಾಸರಿ ದೂರ ಕೇವಲ ಮೂರು ಲಕ್ಷದ 84 ಸಾವಿರ ಕಿ.ಮೀ.ಯಾದರೆ, ಭೂಮಿ ಸೂರ್ಯರ ಸರಾಸರಿ ದೂರ ಸುಮಾರು 15 ಕೋಟಿ ಕಿ.ಮೀ.

ಸೂರ್ಯನನ್ನು ಬರೇ ಕಣ್ಣಿನಿಂದ ಯಾವಾಗಲೂ ನೋಡಬಾರದು. ಗ್ರಹಣ ಕಾಲದಲ್ಲಂತೂ ಬರೆ ಕಣ್ಣಿನಿಂದ ನೋಡಲೇಬಾರದು. ಆದರೆ ಚಂದ್ರಗ್ರಹಣ ವನ್ನು ಬರೇ ಕಣ್ಣಿಂದ ನೋಡಿ ಆನಂದಿಸಬಹುದು ಎಂದು ಡಾ.ಎ.ಪಿ.ಭಟ್ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X