ಭಾಷಣದ ಮಧ್ಯೆ ಮೈಕ್ ಬಂದ್ ಆಗಿದ್ದಕ್ಕೆ ಸಿದ್ದರಾಮಯ್ಯ, ಡಿಕೆಶಿ ಮೇಲೆ ಸಂಶಯ ವ್ಯಕ್ತಪಡಿಸಿದ ನಳಿನ್ ಕುಮಾರ್ ಕಟೀಲ್ !

ಧಾರವಾಡ: 'ಭಾಷಣದ ಮಧ್ಯೆ ಮೈಕ್ ಬಂದ್ ಆಗಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಂಶಯ ವ್ಯಕ್ತಪಡಿಸಿ, ಧ್ವನಿ ವರ್ಧಕ ಯುವಕನನ್ನು ಪ್ರಶ್ನಿಸಿರುವ ಪ್ರಸಂಗ ನಡೆದಿದೆ.
ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಬುಧವಾರ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಭಾಗವಹಿಸಿದ್ದ ನಳಿನ್ ಕುಮಾರ್ ಕಟೀಲ್ ಭಾಷಣ ಮಾಡುತ್ತಿದ್ದ ವೇಳೆ ಮೈಕ್ ಕೈಕೊಟ್ಟಿದೆ. ಈ ವೇಳೆ ಧ್ವನಿವರ್ಧಕ ವ್ಯವಸ್ಥೆಯ ಯುವಕನಿಗೆ "ನಿನ್ನದು ಯಾವ ಊರಪ್ಪ? ಬೇರೆ ಮೈಕ್ ಇಲ್ವಾ ನಿಮ್ಮತ್ರ? ನೀನು ಕನಕಪುರದಿಂದ ಬಂದಿದ್ದೀಯಾ?" ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ "ಸಿದ್ದರಾಮಯ್ಯ ಕಳಿಸಿದ್ರಾ ಅಥವಾ ಡಿಕೆಶಿ ಕಳಿಸಿದ್ರಾ" ಎಂದೂ ಯುವಕನನ್ನು ಪ್ರಶ್ನಿಸಿ, ನಗೆ ಚಟಾಕಿ ಹಾರಿಸಿದರು.
ಸಂಘಟಕರು ಮೈಕ್ ಬದಲಾಯಿಸಿದ ನಂತರ ಕಟೀಲ್ ಭಾಷಣ ಮುಂದುವರಿಸಿದರು.
Next Story