ಮಡಿಕೇರಿ: ಮಾಜಿ ಸೈನಿಕರೊಂದಿಗೆ ಸಮಾಲೋಚನೆ ನಡೆಸಿದ ರಾಹುಲ್ ಗಾಂಧಿ
ಮಡಿಕೇರಿ, ಅ.13 : ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೈನಿಕರೊಂದಿಗೆ ಸಮಾಲೋಚನೆ ನಡೆಸಿದರು. ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ ಎ.ಎಸ್.ಪೊನ್ನಣ್ಣ ಅವರು ಇದೇ ಸಂದರ್ಭ ರಾಹುಲ್ ಗೆ ಕೊಡಗಿನ ಸಾಂಪ್ರದಾಯಿಕ ಪೀಚೆ ಕತ್ತಿಯನ್ನು ಉಡುಗೊರೆಯಾಗಿ ನೀಡಿದರು.
ಚಿತ್ರದುರ್ಗದಲ್ಲಿ ಭೇಟಿಯಾದ ಪೊನ್ನಣ್ಣ ಕೊಡಗಿನ ವಿವಿಧ ವಿಚಾರಗಳ ಕುರಿತು ಚರ್ಚಿಸಿದರು.
ಮಾಜಿ ಸೈನಿಕರು ತಮ್ಮ ಅಹವಾಲುಗಳನ್ನು ರಾಹುಲ್ ಮುಂದಿಟ್ಟರು. ಭೂ-ಮಂಜೂರಾತಿ, ಪಿಂಚಣಿ, ವಿಧವಾ ವೇತನ, ಸೇನಾ ನೇಮಕಾತಿ ಪ್ರಕ್ರಿಯೆ, ಸುಸಜ್ಜಿತ ಆಧುನಿಕ ಹಾಕಿ ಕ್ರೀಡಾಂಗಣದ ಅಗತ್ಯತೆ ಮತ್ತಿತರ ವಿಚಾರಗಳ ಕುರಿತು ಗಮನ ಸೆಳೆಯಲಾಯಿತು.
Next Story