ವಿಚ್ಛೇದನೆ ನೀಡುವಂತೆ ಮಾನಸಿಕ ಕಿರುಕುಳ ಆರೋಪ: ಪತ್ನಿ ದೂರು

ಉಡುಪಿ, ಅ.13: ವಿಚ್ಛೇದನೆ ನೀಡುವಂತೆ ಮಾನಸಿಕ ಕಿರುಕುಳ ನೀಡುತ್ತಿರುವ ಪತಿಯ ವಿರುದ್ಧ ಪತ್ನಿ ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಕುಕ್ಕಿಕಟ್ಟೆಯ ಕುಶಾಲಾಕ್ಷಿ (43) ಎಂಬವರು ಸತೀಶ್ ಬಿ.ಎಸ್. ಎಂಬವರನ್ನು ಮದುವೆಯಾಗಿದ್ದು, 12 ವರ್ಷದ ಮಗ ಇದ್ದಾನೆ. ಸತೀಶ್ ಬೆದರಿಕೆ ಹಾಕಿ ವಿಚ್ಛೇದನೆ ನೀಡುವಂತೆ ಮಾನಸಿಕ ಕಿರುಕುಳ ಕೊಡುತ್ತಿರುವುದಾಗಿ ದೂರಲಾಗಿದೆ. ಅಲ್ಲದೆ ಮಗನ ಎದುರಿನಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕೋಲಿನಿಂದ ಕಣ್ಣಿಗೆ ಹೊಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





