ವಿಶ್ವ ಮಾನಸಿಕ ಆರೋಗ್ಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ

ಉಡುಪಿ, ಅ.13: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಕುರಿತು ಮಾಹಿತಿ ನೀಡಲಾಯಿತು.
ವಿದ್ಯಾರ್ಥಿಗಳ ಮನೋ ಸ್ಥೈರ್ಯವನ್ನು ಹೆಚ್ಚಿಸಿಕೊಂಡು ಆತ್ಮಹತ್ಯೆಯನ್ನು ತಡೆಗಟ್ಟುವಂತೆ ಹಾಗೂ ಗಾಂಜಾ, ಚೆರಸ್, ಬ್ರೌನ್ ಶುಗರ್ ಮೊದಲಾದ ಅಮಲು ಪದಾರ್ಥಗಳ ಸೇವನೆಯಿಂದ ದೂರ ಇರುವಂತೆ ಹಾಗೂ ಇಂತಹ ಚಟಗಳಿಗೆ ಬಲಿಯಾಗದಂತೆ ತಿಳುವಳಿಕೆ ನೀಡಲಾಯಿತು.
ಮಾನಸಿಕ ಖಿನ್ನತೆ, ಅವಮಾನಕರ ಘಟನೆ, ಪರೀಕ್ಷಾ ಸಮಯದಲ್ಲಿ ಮಕ್ಕಳಿಂದ ಅತಿಯಾದ ನಿರೀಕ್ಷೆ, ಮಾದಕ ದ್ರವ್ಯ ಸೇವನೆ, ಪ್ರೇಮ ವೈಫಲ್ಯ, ವೈವಾಹಿಕ ತೊಂದರೆ, ದೈಹಿಕ ಖಾಯಿಲೆ, ಆರ್ಥಿಕ ಸಮಸ್ಯೆ, ಪ್ರೀತಿ ಪಾರ್ಥರ ಅಗಲು ವಿಕೆ, ಖಿನ್ನತೆ ಹಾಗೂ ಸಮಸ್ಯೆಗಳಿಂದ ಬಳಲುವವರು, ಸಾವಿನ ಬಗ್ಗೆ ಪದೇ ಪದೇ ಮಾತನಾಡುವವರು, ಸಮಾಜದಿಂದ ವಿಮುಖರಾಗಿ ಏಕಾಂಗಿಯಾಗಿ ರುವವರು ಸಾವಿಗೆ ಬೇಕಾಗುವ ಪರಿಕರಗಳನ್ನು ಜೋಡಿಸುತ್ತಿರು ತ್ತಾರೆ. ಅಂತಹವರ ಬಗ್ಗೆ ಕಾಳಜಿ ವಹಿಸಿ ಸಂಬಂಧಪಟ್ಟವರು ಅಥವಾ ಅವರ ಸ್ನೇಹಿತ ರಿಗೆ ಮಾಹಿತಿ ನೀಡಿ ಮನೋಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡ ಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.





