Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇರಳ ‘ನರಬಲಿ ’ಪ್ರಕರಣ: ಆರೋಪಿಗಳಿಗೆ 12...

ಕೇರಳ ‘ನರಬಲಿ ’ಪ್ರಕರಣ: ಆರೋಪಿಗಳಿಗೆ 12 ದಿನಗಳ ಪೊಲೀಸ್ ಕಸ್ಟಡಿ

ವಾರ್ತಾಭಾರತಿವಾರ್ತಾಭಾರತಿ13 Oct 2022 9:44 PM IST
share
ಕೇರಳ ‘ನರಬಲಿ ’ಪ್ರಕರಣ: ಆರೋಪಿಗಳಿಗೆ 12 ದಿನಗಳ ಪೊಲೀಸ್ ಕಸ್ಟಡಿ

ಎರ್ನಾಕುಳಂ,ಅ.13: ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಆರ್ಥಿಕ ಏಳಿಗೆಗಾಗಿ ನರಬಲಿ ವಿಧಿಯ ಭಾಗವಾಗಿ ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಿರುವ ಆರೋಪಿಗಳಾದ ನಾಟಿವೈದ್ಯ ಮತ್ತು ಮಾಲಿಷ್ ವೃತ್ತಿಯ ಭಗವಲ್ ಸಿಂಗ್ (Bhagwal Singh),ಆತನ ಪತ್ನಿ ಲೈಲಾ (Laila) ಮತ್ತು ರೆಸ್ಟೋರಂಟ್ ಮಾಲಿಕ ಮುಹಮ್ಮದ್ ಶಫಿ ಅಲಿಯಾಸ್ ರಶೀದ್ (Muhammad Shafi alias Rasheed) ಅವರಿಗೆ ಇಲ್ಲಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗುರುವಾರ 12 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ. ಹೊಟ್ಟೆಪಾಡಿಗಾಗಿ ಎರ್ನಾಕುಳಮ್ನಲ್ಲಿ ಲಾಟರಿ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ರೋಸಿಲಿ (Rosalie)(49) ಮತ್ತು ಪದ್ಮಂ (Padma)(52) ಹತ್ಯೆಯಾದ ಮಹಿಳೆಯರಾಗಿದ್ದು,ಅವರನ್ನು ಮೂರು ತಿಂಗಳ ಅಂತರದಲ್ಲಿ ಅಪಹರಿಸಲಾಗಿತ್ತು. ರೋಸಿಲಿ ಜೂನ್ 6ರಿಂದ ಮತ್ತು ಪದ್ಮಂ ಸೆ.26ರಿಂದ ನಾಪತ್ತೆಯಾಗಿದ್ದರು.

ಪಟ್ಟಣಂತಿಟ್ಟ ಜಿಲ್ಲೆಯ ಎಳಂತೂರು ಗ್ರಾಮದಲ್ಲಿಯ ಸಿಂಗ್ ದಂಪತಿಯ ಮನೆಯಲ್ಲಿ ಹೂಳಲಾಗಿದ್ದ ಹತ ಮಹಿಳೆಯರ ಶವಗಳನ್ನು ಮಂಗಳವಾರ ಹೊರಕ್ಕೆ ತೆಗೆಯಲಾಗಿತ್ತು. ಈ ಮಹಿಳೆಯರು ಕೊಚ್ಚಿಯಲ್ಲಿಯ ರಶೀದ್ನ ರೆಸ್ಟೋರಂಟ್ಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು.

ಹತ್ಯೆಗಳ ತನಿಖೆಗಾಗಿ ಕೇರಳ ಪೊಲೀಸರು ಪ್ರಕರಣವನ್ನು ಭೇದಿಸಿದ್ದ ಕೊಚ್ಚಿ ಡಿಸಿಪಿ ಎಸ್.ಶಶಿಧರನ್ ನೇತೃತ್ವದಲ್ಲಿ ಬುಧವಾರ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ರಶೀದ್ ಲೈಂಗಿಕ ಕಾರ್ಯಕ್ಕಾಗಿ 15,000 ರೂ.ಗಳನ್ನು ನೀಡುವುದಾಗಿ ಪದ್ಮಂಗೆ ಆಮಿಷವನ್ನೊಡ್ಡಿದ್ದ. ಭರವಸೆ ನೀಡಿದ್ದ ಹಣದ ಕುರಿತು ವಾಗ್ವಾದದ ಬಳಿಕ ರಶೀದ್ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ್ದ ಮತ್ತು ಆಕೆಯ ಗುಪ್ತಾಂಗದಲ್ಲಿ ಚೂರಿಯನ್ನು ತೂರಿಸಿದ್ದ ಮತ್ತು ಗಂಟಲನ್ನು ಸೀಳಿದ್ದ. ಬಳಿಕ ಆಕೆಯ ಶರೀರವನ್ನು 56 ತುಂಡುಗಳನ್ನಾಗಿ ಮಾಡಿ ಬಕೆಟ್ಗಳಲ್ಲಿ ತುಂಬಿ ಹೊಂಡದಲ್ಲಿ ಹೂತಿದ್ದ ಎಂದು ಪೊಲೀಸರು ಕಸ್ಟಡಿ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.

‌ಜೂನ್ನಲ್ಲಿ ರಶೀದ್ ಇದೇ ರೀತಿ ರೋಸಿಲಿಗೆ 10 ಲ.ರೂ.ಗಳ ಆಮಿಷವೊಡ್ಡಿ ಸಿಂಗ್ ದಂಪತಿಯ ಮನೆಗೆ ಬರುವಂತೆ ಆಮಿಷವೊಡ್ಡಿದ್ದ. ಅಲ್ಲಿ ಮಂಚವೊಂದಕ್ಕೆ ಆಕೆಯ ಕೈಕಾಲುಗಳನ್ನು ಕಟ್ಟಿದ್ದ ಆರೋಪಿಗಳು ಬಾಯಿಗೆ ಬಟ್ಟೆ ತುರುಕಿ ಪ್ಲಾಸ್ಟರ್ ಅಂಟಿಸಿದ್ದರು. ಸಿಂಗ್ ಆಕೆಯ ಸ್ತನಗಳನ್ನು ಛೇದಿಸಿದ್ದು,ನಂತರ ಶರೀರವನ್ನು ತುಂಡುತುಂಡಾಗಿಸಿ ಹುಗಿಯಲಾಗಿತ್ತು ಎಂದೂ ವರದಿಯಲ್ಲಿ ತಿಳಿಸಲಾಗಿದೆ.

‘ಆರೋಪಿಗಳು ಹತ ಮಹಿಳೆಯರ ದೇಹದ ಮಾಂಸವನ್ನು ಭಕ್ಷಿಸಿದ್ದರು ಎಂಬ ಮಾಹಿತಿ ನಮ್ಮ ಬಳಿಯಿದೆ,ಆದರೆ ಆ ಬಗ್ಗೆ ಯಾವುದೇ ಸಾಕ್ಷಾಧಾರವಿಲ್ಲ. ಪ್ರಕರಣವನ್ನು ಗಮನಿಸಿದರೆ ಇಂತಹ ಘಟನೆಗೆ ಅವಕಾಶವಿದೆ ಮತ್ತು ನಾವು ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ’ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಸಿ.ಎಚ್.ನಾಗರಾಜು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದರು.

ರಶೀದ್ ವಿಕೃತ ಕಾಮಿಯಾಗಿದ್ದು,ಕ್ರಿಮಿನಲ್ ಇತಿಹಾಸವನ್ನು ಹೊಂದಿದ್ದಾನೆ. ಆತ 75 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯೂ ಆಗಿದ್ದು,ಆಕೆಯ ಮೈಮೇಲೂ ರೋಸಿಲಿ ಮತ್ತು ಪದ್ಮಂ ರೀತಿಯಲ್ಲೇ ಗಾಯಗಳಾಗಿದ್ದವು ಎಂದರು.

ಆರ್ಥಿಕ ಮುಗ್ಗಟ್ಟಿನಲ್ಲಿರುವವರನ್ನು ಪತ್ತೆ ಹಚ್ಚಲು ರಶೀದ್ ಫೇಸ್ಬುಕ್ ಬಳಸುತ್ತಿದ್ದ. ಫೇಸ್ಬುಕ್ (Facebook) ಮೂಲಕವೇ ಆತ ಸಿಂಗ್ ಸಂಪರ್ಕ ಬೆಳೆಸಿದ್ದು, ವಾಮಾಚಾರದಿಂದ ಮತ್ತು ನರಬಲಿ ನೀಡುವುದರಿಂದ ಆರ್ಥಿಕ ಏಳಿಗೆಯಾಗುತ್ತದೆ ಎಂದು ಆತನನ್ನು ನಂಬಿಸಿದ್ದ.

ಬುಧವಾರ ನ್ಯಾಯಾಲಯವು ಮೂವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಆರೋಪಿಗಳು ಇಂತಹ ಇನ್ನಷ್ಟು ಅಪರಾಧಗಳನ್ನು ಎಸಗಿರಬಹುದು ಎಂದು ಶಂಕಿಸಿದ್ದ ಪೊಲೀಸರು ಬಳಿಕ ಎರಡು ವಾರಗಳ ಕಸ್ಟಡಿಯನ್ನು ಕೋರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X