ನಂತೂರು: ಬಸ್ಸಿನಡಿಗೆ ಬಿದ್ದ ಮಹಿಳೆಗೆ ಗಾಯ

ಮಂಗಳೂರು : ನಗರದ ನಂತೂರು ಜಂಕ್ಷನ್‌ನಲ್ಲಿ ಬಸ್ಸಿನಡಿಗೆ ಬಿದ್ದು ಮಹಿಳೆಯೊಬ್ಬರು ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ವರದಿಯಾಗಿದೆ.
ನೀರುಮಾರ್ಗ ಕಡೆಯಿಂದ ಬಸ್ಸಿನಲ್ಲಿ ಬಂದ ಸುಷ್ಮಾ ಎಂಬವರು ನಂತೂರಿನಲ್ಲಿ ಇಳಿದು ಬೋಂದೆಲ್ ಕಡೆಗೆ ತೆರಳುವ ಸಿಟಿ ಬಸ್ ಹತ್ತಲು ತಾನು ಬಂದ ಬಸ್ಸಿನ ಮುಂಭಾಗದಿಂದಲೇ ರಸ್ತೆ ದಾಟಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಇರುವುದು ಗಮನಕ್ಕೆ ಬಾರದೆ ಚಾಲಕ ಬಸ್ ಚಲಾಯಿಸಿದ್ದು, ಇದರಿಂದ ಮಹಿಳೆಯು ಬಸ್ಸಿನಡಿಗೆ ಬಿದ್ದಿದ್ದಾರೆ.
ಗಾಯಾಳು ಸುಷ್ಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





