ಚಿತ್ರದುರ್ಗ: ಭಾರತ್ ಜೋಡೋ ಯಾತ್ರೆ ನಡುವೆ ನೀರಿನ ಟ್ಯಾಂಕ್ ಏರಿದ ರಾಹುಲ್ ಗಾಂಧಿ
ಸಿದ್ಧರಾಮಯ್ಯ, ಡಿಕೆಶಿ ಸಾಥ್

Photo: INCIndia
ಚಿತ್ರದುರ್ಗ: ಭಾರತ್ ಜೋಡೊ ಯಾತ್ರೆಯ ನಡುವೆ ರಾಹುಲ್ ಗಾಂಧಿ ಮರಳಹಳ್ಳಿಯ ನೀರಿನ ಟ್ಯಾಂಕ್ ಏರಿ ರಾಷ್ಟ್ರಧ್ವಜ ಹಾರಿಸಿ ಗಮನ ಸೆಳೆದಿದ್ದಾರೆ.
ರಾಹುಲ್ ಗಾಂಧಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡಾ ಸಾಥ್ ನೀಡಿದ್ದು, ಟ್ಯಾಂಕ್ ಏರಿ ತ್ರಿವರ್ಣ ಹಾರಿಸಿದರು.
ಭಾರತ್ ಜೋಡೊ ಯಾತ್ರೆ ನೋಡಲು ಮರಳಹಳ್ಳಿಯಲ್ಲಿ ಜನರು ನೀರಿನ ಟ್ಯಾಂಕ್ ಏರಿದ್ದರು. ಇದನ್ನು ಗಮನಿಸಿದ ರಾಹುಲ್ ಗಾಂಧಿ ಟ್ಯಾಂಕ್ ಬಳಿ ತೆರಳಿ ಏಣಿ ಏರಿದರು. ಗಾಂಧಿ ಜೊತೆಗಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರನ್ನು ಹಿಂಬಾಲಿಸಿ ಟ್ಯಾಂಕ್ ಏರಿದರು.
Tiranga unites us all.#BharatJodoYatra embraces the true essence of the Tricolour.pic.twitter.com/utpGxMTVTn
— Congress (@INCIndia) October 13, 2022
Next Story