ನಾರ್ಥ್ ಕರೋಲಿನಾದಲ್ಲಿ ಗುಂಡಿನ ದಾಳಿ: ಕನಿಷ್ಠ 5 ಮಂದಿ ಮೃತ್ಯು

ವಾಷಿಂಗ್ಟನ್: ದಕ್ಷಿಣ ಅಮೆರಿಕದ ರಾಜ್ಯವಾದ ನಾರ್ಥ್ ಕರೋಲಿನಾದಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಕರ್ತವ್ಯದಲ್ಲಿಲ್ಲದ ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ.
ರಲೇಹ್ ನಗರದಲ್ಲಿ ನಡೆದ ಈ ದುರಂತ ಘಟನೆಯಲ್ಲಿ ಹಲವು ಮಂದಿಗೆ ಗುಂಡೇಟು ತಗುಲಿದೆ ಎಂದು ಮೇಯರ್ ಮೇರಿ ಆ್ಯನ್ ಬಾಲ್ಡಿವಿನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಗುಂಡಿನ ದಾಳಿಯಲ್ಲಿ ಐದು ಮಂದಿ ಮೃತಪಟ್ಟಿರುವ ಬಗ್ಗೆ ರಲೇಹ್ ಪೊಲೀಸ್ ಇಲಾಖೆ ದೃಢಪಡಿಸಿದೆ.
ಈ ಪೈಕಿ ಒಬ್ಬರು ರಲೇಹ್ ನಗರದ ಪೊಲೀಸ್ ಅಧಿಕಾರಿ ಎಂದು ಸ್ಪಷ್ಟಪಡಿಸಿದರು. ದಾಳಿಕೋರನನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.
Next Story





