Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಾನೇಕೆ ಬೌದ್ಧನಾದೆ - ಡಾ. ಬಿ.ಆರ್....

ನಾನೇಕೆ ಬೌದ್ಧನಾದೆ - ಡಾ. ಬಿ.ಆರ್. ಅಂಬೇಡ್ಕರ್

ಇಂದು ಡಾ. ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿದ ದಿನ

ವಾರ್ತಾಭಾರತಿವಾರ್ತಾಭಾರತಿ14 Oct 2022 12:19 PM IST
share
ನಾನೇಕೆ ಬೌದ್ಧನಾದೆ  - ಡಾ. ಬಿ.ಆರ್. ಅಂಬೇಡ್ಕರ್

1956ರ ಅಕ್ಟೋಬರ್ 14ರಂದು ತನ್ನವರೊಂದಿಗೆ ಬೌದ್ಧನಾಗುತ್ತ ಅಂಬೇಡ್ಕರ್ ಹೇಳಿದ ಮಾತುಗಳಿವು:

‘‘ಹಿಂದೂ ಧರ್ಮವನ್ನು ತ್ಯಜಿಸುವ ನಿರ್ಧಾರವನ್ನು 1935ರಲ್ಲಿ ನಾಸಿಕ್‌ನ ಯೋಲಾನಲ್ಲಿ ನಡೆದ ದೊಡ್ಡ ಸಮ್ಮೇಳನದಲ್ಲಿ ತೆಗೆದುಕೊಂಡೆ. ಆಗಿನಿಂದ ಹೋರಾಟ ಮುಂದುವರಿಸಿದ್ದೇನೆ. ಆ ಸಮ್ಮೇಳನದಲ್ಲಿ ಹಿಂದೂವಾಗಿ ಹುಟ್ಟಿದೆ, ಆದರೆ ಹಿಂದೂವಾಗಿ ಸಾಯಲಾರೆ ಎಂದು ಪ್ರತಿಜ್ಞೆಮಾಡಿದೆ. ಈಗ ಮತಾಂತರವು ನನಗೆ ಅಗಾಧ ತೃಪ್ತಿಯನ್ನೂ, ನೆಮ್ಮದಿಯನ್ನೂ ನೀಡಿದೆ. ನರಕದಿಂದ ಮುಕ್ತಿ ದೊರೆತಂತೆ ಅನ್ನಿಸುತ್ತಿದೆ. ಮತಾಂತರಗೊಂಡ ನೀವೆಲ್ಲರೂ ಇದನ್ನು ಅನುಭವದಿಂದಲೇ ಅರಿತುಕೊಳ್ಳಬೇಕು, ಕುರುಡು ನಂಬಿಕೆಯ ಅನುಯಾಯಿಗಳು ಬೇಡ. ನನಗೆ ಕುರಿಗಳ ಬುದ್ಧಿ ಇಷ್ಟವಿಲ್ಲ. ಬುದ್ಧನಲ್ಲಿ ಶರಣಾಗಬರುವವರು ತಮ್ಮ ಸ್ವಂತ ಅರಿವಿನಿಂದ, ಸ್ವಂತ ತ್ಯಾಗದಿಂದ ಬರಬೇಕು. ಏಕೆಂದರೆ ಪಾಲಿಸಲು ಅತಿ ಕಷ್ಟವಾದ ಧರ್ಮ ಇದು.

ಮನುಷ್ಯನ ಏಳ್ಗೆಗೆ ಧರ್ಮ ಅತ್ಯಂತ ಅಗತ್ಯ. ಕಾರ್ಲ್ ಮಾರ್ಕ್ಸ್‌ನ ಅನುಯಾಯಿಗಳು ಧರ್ಮವೆಂದರೆ ಅಫೀಮು ಎನ್ನುತ್ತಾರೆ. ಆದರೆ ಮಾರ್ಕ್ಸ್‌ನ ಈ ಹೇಳಿಕೆಯನ್ನು ಹಾಗೇ ಒಪ್ಪಲು ಬರುವುದಿಲ್ಲ. ಹಾಗೆ ಹೇಳುವವರಿಗೆ ಧರ್ಮವೆಂದರೆ ಏನೂ ಮುಖ್ಯವಲ್ಲ, ಅದು ಏನೂ ಅರ್ಥವಿಲ್ಲದ್ದು. ನಮ್ಮಲ್ಲೂ ಕೆಲವರು ತಿನ್ನು-ಕುಡಿ-ಮಜಾಮಾಡು ಎಂಬ ಸಂಪ್ರದಾಯದವರು, ಅವರಿಗೆ ಬೇಕಾಗಿರುವುದೆಲ್ಲ ತಿಂಡಿಗೆ ಬ್ರೆಡ್ ಬೆಣ್ಣೆ, ಮಧ್ಯಾಹ್ನ ರುಚಿಕಟ್ಟಾದ ಊಟ, ಮಲಗಲು ಸುಪ್ಪತ್ತಿಗೆ, ಸಮಯ ಕಳೆಯಲು ಸಿನೆಮಾ. ಅವರ ಜೀವನದಲ್ಲಿ ಧರ್ಮಕ್ಕೆ ಜಾಗವಿಲ್ಲ. ಅವರನ್ನು ನಾನು ಒಪ್ಪುವುದಿಲ್ಲ. ನನ್ನ ತಂದೆಯ ಬಡತನದ ದೆಸೆಯಿಂದ ಅದ್ಯಾವುದನ್ನೂ ನನಗೆ ಅನುಭವಿಸಲಾಗಲಿಲ್ಲ. ಜೀವನದಲ್ಲಿ ಎಷ್ಟೋ ದಿನಗಳವರೆಗೆ ಕಷ್ಟಪಟ್ಟು ದುಡಿಯುತ್ತಿದ್ದೆ. ಆದರೆ ಅದು ನನ್ನನ್ನು ಅಧರ್ಮೀಯನನ್ನಾಗಿ ಮಾಡಲಿಲ್ಲ.

ಬಡವರು ಅನುಭವಿಸಿ ತಾಳಿಕೊಳ್ಳಬೇಕಾದ ಕಷ್ಟಗಳ ಅರಿವಿದೆ. ಜನರ ಆರ್ಥಿಕ ಸ್ಥಿತಿ ಸುಧಾರಿಸುವ ಕುರಿತು ನಾವು ಹೋರಾಟ ನಡೆಸಬೇಕು. ಆರ್ಥಿಕವಾಗಿ ಸಬಲರಾಗಿ ಸ್ವತಂತ್ರರಾಗಬೇಕು. ನನ್ನ ಜೀವಮಾನವಿಡೀ ಅದಕ್ಕಾಗಿಯೇ ಹೋರಾಡುತ್ತಿದ್ದೇನೆ. ಅದಷ್ಟೇ ಅಲ್ಲ, ಮನುಷ್ಯಕುಲವೇ ಆರ್ಥಿಕವಾಗಿ ಸಬಲವಾಗಬೇಕು, ಆದರೆ ಬೇರೆ ವಿಚಾರಗಳೂ ಇವೆ.

ಮನುಷ್ಯ ಮತ್ತು ಪ್ರಾಣಿಯ ನಡುವೆ ವ್ಯತ್ಯಾಸಗಳಿವೆ. ತನ್ನ ಬದುಕಿಗಾಗಿ ಆಹಾರವೊಂದನ್ನು ಬಿಟ್ಟು ಪ್ರಾಣಿಗೆ ಮತ್ತೇನೂ ಬೇಡ. ಆದರೆ ಮನುಷ್ಯನಿಗೆ ದೇಹ ಮತ್ತು ಸಂವೇದನಾಶೀಲ ಮನಸ್ಸಿದೆ. ದೇಹದ ಜೊತೆಜೊತೆಗೇ ಮನಸ್ಸು ಬೆಳೆಯಬೇಕು. ಮನಸ್ಸು ಶುದ್ಧ ಆಲೋಚನೆಗಳೊಂದಿಗೂ ಕೂಡಿರಬೇಕು. ಕಾಯಿಲೆಗಳಿಂದ ಮುಕ್ತವಾಗಿರಬೇಕಾದರೆ ಹೇಗೆ ದೃಢವಾದ ದೇಹವನ್ನು ಹೊಂದಿರಬೇಕೋ ಹಾಗೆ, ದೇಹವನ್ನು ಆರೋಗ್ಯಯುತ ವಾಗಿಡಬೇಕಾದರೆ ಶುದ್ಧ ಮನಸ್ಸಿರಬೇಕು. ಇಲ್ಲದಿದ್ದರೆ ಮನುಷ್ಯ ಅಭಿವೃದ್ಧಿ ಹೊಂದುತ್ತಿದ್ದಾನೆಂದು ಹೇಳಲಾಗದು.

ಮನುಷ್ಯನ ಮನಸ್ಸು ಏಕೆ ಕಾಯಿಲೆ ಬೀಳುತ್ತದೆ? ಮಹಾರಾಷ್ಟ್ರದ ಸಂತ ಕವಿ ರಾಮದಾಸ ಹೇಳುತ್ತಾನೆ: ‘ಮನುಷ್ಯನಲ್ಲಿ ಉತ್ಸಾಹವಿಲ್ಲ ಎಂದರೆ ಅದರರ್ಥ ಒಂದೋ ಅವನ ಮನಸ್ಸು ಅಥವಾ ಅವನ ದೇಹಕ್ಕೆ ಕಾಯಿಲೆಯಾಗಿರಬೇಕು.’ ಮನುಷ್ಯನ ಉತ್ಸಾಹವನ್ನು ಹೀರಿಬಿಡುವುದು ಯಾವುದು? ಉತ್ಸಾಹವಿಲ್ಲದಿದ್ದರೆ ಜೀವನವೇ ಗುಲಾಮಗಿರಿಯೆನಿಸುತ್ತದೆ. ಎಳೆದುಕೊಂಡು ಹೋಗಬೇಕಾದ ಭಾರವಾಗುತ್ತದೆ. ಉತ್ಸಾಹವಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಉತ್ಸಾಹ ಏಕೆ ಕಳೆದುಹೋಗುತ್ತದೆ? ಮನುಷ್ಯನ ಮಟ್ಟಿಗೆ ಹೇಳುವುದಾದರೆ ತನ್ನನ್ನು ತಾನು ಉಚ್ಛ್ರಾಯ ಸ್ಥಿತಿಗೊಯ್ಯಲು ಅವಕಾಶಗಳಿಲ್ಲದಿರುವುದು ಉತ್ಸಾಹವನ್ನು ಕಳೆದುಹಾಕುತ್ತದೆ. ನಿರಾಶಾದಾಯಕ ಪರಿಸ್ಥಿತಿ ಉತ್ಸಾಹ ಕಳೆಯುತ್ತದೆ. ಅಂಥ ಮನಸ್ಸು ಕಾಯಿಲೆಗೊಳಗಾಗುತ್ತದೆ.

ಸದ್ಯದ ಕಷ್ಟಗಳಿಂದ ಪಾರಾಗಲು ಯಾವುದೇ ಭರವಸೆ ಕಾಣದಿದ್ದರೆ ಆತ ಯಾವಾಗಲೂ ಅಸಂತೋಷಿಯಾಗಿರುತ್ತಾನೆ. ಉತ್ಸಾಹ ಹುಟ್ಟುವುದು ಯಾವಾಗ? ಒಬ್ಬ ಉಸಿರಾಡುವಷ್ಟು ಮುಕ್ತನಾಗಿದ್ದು ತನ್ನ ಕೆಲಸಕ್ಕೆ ಸೂಕ್ತ ಪ್ರತಿಫಲ ದೊರೆಯುತ್ತಿದ್ದರೆ ಉತ್ಸಾಹ, ಸ್ಫೂರ್ತಿ ಹೊಂದುತ್ತಾನೆ. ಶಾಲೆಯಲ್ಲಿ ಮಾಸ್ತರರು ‘ಓಹೋ, ಇಲ್ಲೊಬ್ಬ ಹೊಲೆಯ ಹುಡುಗನಿದ್ದಾನೆ. ತನ್ನ ತರಗತಿಯಲ್ಲಿ ಅದು ಹೇಗೆ ಅವನು ಮೊದಲ ಸ್ಥಾನ ಪಡೆಯಲು ಸಾಧ್ಯವಾಯಿತು?’ ಎಂದು ಹೇಳುತ್ತಿದ್ದರೆ, ಮೊದಲ ಸ್ಥಾನ ಯಾವಾಗಲೂ ಬ್ರಾಹ್ಮಣನಿಗೇ ಮೀಸಲಾಗಿರುವುದೆಂದರೆ ಆ ಹೊಲೆಯ ಹುಡುಗ ಹೇಗೆ ಉತ್ಸಾಹ, ಸ್ಫೂರ್ತಿ ಭರವಸೆಯನ್ನು ಹೊಂದುತ್ತಾನೆ? ತನ್ನ ಬದುಕಿನಲ್ಲಿ ಉನ್ನತಿಯನ್ನು ಹೇಗೆ ಸಾಧಿಸುತ್ತಾನೆ?

ದುರದೃಷ್ಟವಶಾತ್ ಅಸಮಾನತೆ ಮತ್ತು ಅನ್ಯಾಯದ ತತ್ವಗಳ ಮೇಲೆ ನಿಂತಿರುವ ಹಿಂದೂ ಧರ್ಮವು ಉತ್ಸಾಹ ತುಂಬಲು ಸಾಧ್ಯವಿಲ್ಲ. ಅಸ್ಪೃಶ್ಯರು ಹಿಂದೂ ಧರ್ಮದ ನೆರಳಿನಲ್ಲಿ ಗುಲಾಮಗಿರಿ ನಡೆಸುವ ತನಕ ಅವರ ಜೀವನ ಉತ್ತಮಪಡಿಸಿಕೊಳ್ಳಲು ಯಾವುದೇ ಭರವಸೆ, ಉತ್ಸಾಹ ಹುಟ್ಟುವುದಿಲ್ಲ. ಹೆಚ್ಚೆಂದರೆ ಅವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವತ್ತ ಗಮನ ಕೊಟ್ಟಾರು...’’

ಹೀಗೆ ಹೇಳುತ್ತಾ ಅಂಬೇಡ್ಕರ್ ನೆರೆದ ಜನರಿಗೆ ಬುದ್ಧನ ಮಾರ್ಗ, ಅದನ್ನು ಪಾಲಿಸುವ ಬಗೆ, ಅದರ ಪ್ರಾಮುಖ್ಯತೆ, ಮತಾಂತರದ ಅನಿವಾರ್ಯತೆ ಮೊದಲಾದ ವಿಷಯಗಳ ಕುರಿತು ಸರಳವಾಗಿ, ಮನಮುಟ್ಟುವಂತೆ ಹೇಳಿದರು.

(ಡಾ. ಎಚ್. ಎಸ್. ಅನುಪಮಾ ಅವರ ‘ವಿಮೋಚಕನ ಹೆಜ್ಜೆಗಳು’ ಕೃತಿಯಿಂದ ಆಯ್ದ ಭಾಗ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X