ಅಮೆರಿಕ: ಗುಂಡಿನ ದಾಳಿಯಲ್ಲಿ ಪೊಲೀಸ್ ಸಹಿತ 5 ಮಂದಿ ಮೃತ್ಯು

ವಾಷಿಂಗ್ಟನ್, ಅ.14: ಅಮೆರಿಕದ ನಾರ್ಥ್ ಕರೋಲಿನಾ(North Carolina)ದಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸ್ ಅಧಿಕಾರಿ(police officer) ಸಹಿತ 5 ಮಂದಿ ಮೃತಪಟ್ಟಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.
ನಾರ್ಥ್ ಕರೋಲಿನಾದ ರ್ಯಾಲಿ ಸಿಟಿಯಲ್ಲಿ ಬೆಳಗ್ಗೆ 5 ಗಂಟೆಗೆ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಸಹಿತ 5 ಮಂದಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಪೊಲೀಸ್ ಅಧಿಕಾರಿ ಸಹಿತ ಇಬ್ಬರು ಗಾಯಗೊಂಡಿದ್ದಾರೆ. ಬಳಿಕ ಸ್ಥಳೀಯರನ್ನು ಬಾಗಿಲು ಮುಚ್ಚಿ ಮನೆಯೊಳಗೆ ಇರುವಂತೆ ಸೂಚಿಸಿ ಸುತ್ತಮುತ್ತ ವ್ಯಾಪಕ ಶೋಧ ನಡೆಸಿ ಓರ್ವ ಬಿಳಿಯ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುಂಡಿನ ದಾಳಿಯ ಬಗ್ಗೆ ನಗರದ ಮೇಯರ್ ಮೇರಿ ಆ್ಯನ್ ಬಾಲ್ಡ್‌ವಿನ್ (Mayor Mary Ann Baldwin)ಹಾಗೂ ನಾರ್ಥ್ ಕರೋಲಿನಾ ಗವರ್ನರ್ ರಾಯ್ ಕೂಪರ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. 2022ರಲ್ಲಿ ಅಮೆರಿಕದಲ್ಲಿ ವರದಿಯಾಗಿರುವ 25ನೇ ಗುಂಡಿನ ದಾಳಿ ಪ್ರಕರಣ ಇದಾಗಿದೆ ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
Next Story





