ಒಪೆಕ್ ರಾಷ್ಪ್ರ ಗಳನ್ನು ತೈಲ ಕಡಿತಕ್ಕೆ ಸೌದಿ ಒತ್ತಾಯಿಸಿದೆ: ಅಮೆರಿಕ

ವಾಷಿಂಗ್ಟನ್, ಅ.14: ತೈಲ ಉತ್ಪಾದನೆ(Oil production) ಕಡಿತಗೊಳಿಸುವಂತೆ ಇತರ ಒಪೆಕ್ ದೇಶಗಳನ್ನು ಸೌದಿ ಅರೆಬಿಯಾ(Saudi Arabia) ಬಲವಂತದಿಂದ ಒಪ್ಪಿಸಿದೆ ಎಂದು ಅಮೆರಿಕ ಗುರುವಾರ ಆರೋಪಿಸಿದೆ.
ಒಂದಕ್ಕಿಂತ ಹೆಚ್ಚು ಸದಸ್ಯ ದೇಶಗಳು ಸೌದಿ ಅರೆಬಿಯಾದ ಒತ್ತಾಯವನ್ನು ಒಪ್ಪಲಿಲ್ಲ ಮತ್ತು ಈ ಕುರಿತು ಮತದಾನಕ್ಕೆ ಆಗ್ರಹಿಸಿದವು. ಆದರೆ ಈ ಸದಸ್ಯ ದೇಶಗಳ ಹೆಸರು ಬಹಿರಂಗಪಡಿಸಲು ನಾವು ಬಯಸುವುದಿಲ್ಲ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ(John Kirby) ಹೇಳಿದ್ದಾರೆ.
ತೈಲ ಉತ್ಪಾದನೆಯನ್ನು ಕಡಿಮೆ ಮಾಡಲು ಯಾವುದೇ ಮಾರುಕಟ್ಟೆ ಆಧಾರವಿಲ್ಲ ಎಂಬ ವಿಶ್ಲೇಷಣೆಯನ್ನು ಸೌದಿ ಅರೆಬಿಯಾಕ್ಕೆ ಒದಗಿಸಲಾಗಿದೆ. ಸೌದಿಯ ವಿದೇಶಾಂಗ ಇಲಾಖೆ ವಿಷಯವನ್ನು ತಿರುಗಿಸಲು ಪ್ರಯತ್ನಿಸಬಹುದು. ಆದರೆ ಉತ್ಪಾದನೆ ಕಡಿತವು ರಶ್ಯದ ಆದಾಯವನ್ನು ಹೆಚ್ಚಿಸಲಿದೆ ಮತ್ತು ಉಕ್ರೇನ್ ಆಕ್ರಮಣದ ಬಳಿಕ ಆ ದೇಶದ ಮೇಲೆ ವಿಧಿಸಿರುವ ನಿರ್ಬಂಧದ ಹೊರೆಯನ್ನು ತುಸು ತಗ್ಗಿಸಲಿದೆ ಎಂಬುದಂತೂ ಸ್ಪಷ್ಟವಾಗಿದೆ ಎಂದು ಜಾನ್ ಕಿರ್ಬಿ ಹೇಳಿದ್ದಾರೆ.
Next Story





