ಆತ್ಮಹತ್ಯೆ

ಕಾರ್ಕಳ, ಅ.15: ಅನಾರೋಗ್ಯದಿಂದ ಮಾನಸಿಕವಾಗಿ ನೊಂದು ಅ.7ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಜೋಗುಲಬೆಟ್ಟುವಿನ ರಿಕ್ಷಾ ಚಾಲಕ ಬ್ರೂನ ಸಲ್ದಾನ (57) ಎಂಬವರು ತೀವ್ರವಾಗಿ ಅಸ್ವಸ್ಥಗೊಂಡು ಅ.15ರಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ
ಕಾಪು : ಮದ್ಯ ಸೇವನೆ ಚಟದಿಂದ ಮನನೊಂದ ಪಶ್ಚಿಮ ಬಂಗಾಳದ ಬಿಜೊಯಿ ಬರಮನ್ (26) ಎಂಬವರು ವಾಸವಾಗಿದ್ದ ಶೆಡ್‌ನಲ್ಲಿ ಅ.14ರಂದು ಮಧ್ಯಾಹ್ನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





