ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹಿನ್ನೆಲೆ: ಕೈಕಂಬ ಪೇಟೆಯ ಹೆದ್ದಾರಿ ಅಂಚಿನಲ್ಲಿರುವ ಕೆಲ ಕಟ್ಟಡಗಳ ತೆರವು
ಬಜ್ಪೆ, ಅ.15: ಮಂಗಳೂರು- ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ಕೈಕಂಬ ಪೇಟೆಯ ಹೆದ್ದಾರಿ ಅಂಚಿನಲ್ಲಿರುವ ಕೆಲ ಕಟ್ಟಡಗಳನ್ನು ಅಧಿಕಾರಿಗಳು ಇಂದು ತೆರವುಗೊಳಿಸಿದರು.
ಮಂಗಳೂರು - ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಕಾಮಗಾರಿಯ ಪ್ರಥಮ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈಗಾಗಲೇ ಹೆದ್ದಾರಿ ಇಕ್ಕಟ್ಟಿನಿಂದ ಇದ್ದು ವಾಹನಗಳ ಸವಾರರಿಗೆ ತೊಡಕು ಉಂಟಾಗುತ್ತಿದೆ.