ಭಾರತದ ವರ್ಚಸ್ಸಿಗೆ ಧಕ್ಕೆ ತರುವ ಯತ್ನ:ಜಾಗತಿಕ ಹಸಿವು ಸೂಚ್ಯಾಂಕ ವರದಿ ಕುರಿತು ಕೇಂದ್ರ ಪ್ರತಿಕ್ರಿಯೆ

PHOTO: PTI
ಹೊಸದಿಲ್ಲಿ: ಜಾಗತಿಕ ಹಸಿವು ಸೂಚ್ಯಾಂಕ (ಜಿಎಚ್ಐ)ದ ವರದಿಯನ್ನು ಕೇಂದ್ರ ಸರಕಾರ ಶನಿವಾರ ಖಂಡಿಸಿದೆ.‘‘ತನ್ನ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸಲು ಹಾಗೂ ಪೋಷಕಾಂಶದ ಅಗತ್ಯವನ್ನು ಪೂರೈಸಲು ಸಾಧ್ಯವಾಗದ ದೇಶ’’ ಎಂದು ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ನಿರಂತರ ಪ್ರಯತ್ನದ ಭಾಗ ಈ ಸೂಚ್ಯಾಂಕ ಎಂದು ಅದು ಹೇಳಿದೆ.
ಈ ಸೂಚ್ಯಾಂಕ ಗಂಭೀರ ವಿಧಾನ ಕ್ರಮದ ಸಮಸ್ಯೆಯಿಂದ ಬಳಲಿದೆ ಹಾಗೂ ಹಸಿವಿನ ತಪ್ಪು ಮಾಪನವಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.
2021 ರಲ್ಲಿ ಭಾರತವು 116 ದೇಶಗಳ ಜಾಗತಿಕ ಹಸಿವು ಸೂಚ್ಯಂಕದಲ್ಲಿ 101 ನೇ ಸ್ಥಾನದಲ್ಲಿತ್ತು. ಇದೀಗ 121 ದೇಶಗಳ ಪಟ್ಟಿಯಲ್ಲಿ 107ನೇ ಸ್ಥಾನಕ್ಕೆ ಕುಸಿದಿದೆ. ಭಾರತದ GHI ಸ್ಕೋರ್ ಕೂಡ ಕಡಿಮೆಯಾಗಿದೆ. 2000 ರಲ್ಲಿ 38.8 ರಿಂದ 2014 ಮತ್ತು 2022 ರ ನಡುವೆ 28.2 - 29.1 ರ ಶ್ರೇಣಿಗೆ ಕುಸಿದಿದೆ.
Next Story





