ಟರ್ಕಿ: ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ; 40 ಕ್ಕೂ ಅಧಿಕ ಮಂದಿ ಮೃತ್ಯು

ಬಾರ್ಟಿನ್ : ಉತ್ತರ ಟರ್ಕಿಯಲ್ಲಿ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ 11 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಸುದ್ದಿ ಮಾಧ್ಯಮ ಶನಿವಾರ ವರದಿ ಮಾಡಿದೆ.
ಶುಕ್ರವಾರ ಬಾರ್ಟಿನ್ ಪ್ರಾಂತ್ಯದ ಅಮಸ್ರಾ ಎಂಬ ಪಟ್ಟಣದಲ್ಲಿ ಸ್ಫೋಟ ಸಂಭವಿಸಿದ್ದು, ಸ್ಫೋಟದ ಅವಶೇಷಗಳ ಅಡಿಯಲ್ಲಿ ಹತ್ತಾರು ಜನರು ಸಿಲುಕಿಕೊಂಡಿದ್ದಾರೆ.
ಗಾಯಗೊಂಡ ಹನ್ನೊಂದು ಕಾರ್ಮಿಕರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ದೇಶದ ಆಂತರಿಕ ಸಚಿವ ಸುಲೇಮಾನ್ ಸೋಯ್ಲು ಅವರ ಹೇಳಿಕೆ ನೀಡಿದ್ದಾರೆ.
ಸ್ಫೋಟದ ನಂತರ ಉಂಟಾದ ಬೆಂಕಿಯು ಬಹುತೇಕ ನಿಯಂತ್ರಣದಲ್ಲಿದೆ ಎಂದು ಟರ್ಕಿಯ ಇಂಧನ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಚಿವ ಫಾತಿಹ್ ಡೊನ್ಮೆಜ್ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮ Anadolu ವರದಿ ಮಾಡಿದೆ.
ಸ್ಫೋಟದ ಸಮಯದಲ್ಲಿ ಗಣಿಯಲ್ಲಿ 110 ಜನರಿದ್ದರು ಎಂದು ಆಂತರಿಕ ಸಚಿವ ಸುಲೇಮಾನ್ ಸೋಯ್ಲು ಅವರು ತಿಳಿಸಿದ್ದು, ಅವರು ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ನಡೆಸಲು ಘಟನಾ ಸ್ಥಳಕ್ಕೆ ಅವರು ಧಾವಿಸಿದ್ದಾರೆ ಎಂದು edition.cnn.com ವರದಿ ಮಾಡಿದೆ.
ಸ್ಫೋಟದ ಕಾರಣ ಇನ್ನೂ ಪತ್ತೆಯಾಗಿಲ್ಲ.







