ಮೊದಲ ಬಾರಿಗೆ ಎಂಬಿಬಿಎಸ್ ಕೋರ್ಸ್ ಅನ್ನು ಹಿಂದಿಯಲ್ಲಿ ಬೋಧಿಸಲಿರುವ ಮ.ಪ್ರ.ದ ವೈದ್ಯಕೀಯ ಕಾಲೇಜುಗಳು

ಭೋಪಾಲ್, ಅ. 15: ಮೊದಲ ಬಾರಿಗೆ ಮಧ್ಯಪ್ರದೇಶದ ಎಲ್ಲ 13 ಸರಕಾರಿ ವೈದ್ಯಕೀಯ ಕಾಲೇಜುಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಎಂಬಿಬಿಎಸ್‌ನ 3 ವಿಷಯಗಳಾದ ಅಂಗರಚನಾಶಾಸ್ತ್ರ, ಶರೀರಶಾಸ್ತ್ರ ಹಾಗೂ ಜೀವರಸಾಯನಶಾಸ್ತ್ರವನ್ನು ಹಿಂದಿಯಲ್ಲಿ ಬೋಧಿಸಲಿವೆ.
ಎಂಬಿಬಿಎಸ್‌ನ ಪ್ರಥಮ ವರ್ಷದ ಪುಸ್ತಕಗಳ ಅನುವಾದವನ್ನು ಭೋಪಾಲದಲ್ಲಿ ಅಕ್ಟೋಬರ್ 16ರಂದು ಬಿಡುಗಡೆ ಮಾಡುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ಆರಂಭಿಸಲಿದ್ದಾರೆ.
ವೈದ್ಯಕೀಯ ಹಾಗೂ ಎಂಜಿನಿಯರಿAಗ್ ಕೋರ್ಸ್ಗಳನ್ನು ಹಿಂದಿಯಲ್ಲಿ ಕಲಿಯಲು ಹಾಗೂ ಬೋಧಿಸಲು ಸಾಧ್ಯವಿಲ್ಲ ಎಂಬ ಗ್ರಹಿಕೆಯನ್ನು ಇದು ಬದಲಿಸಲಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಇಂಗ್ಲೀಷ್ ಪುಸ್ತಕದೊಂದಿಗೆ ಹಿಂದಿ ಪುಸ್ತಕ ಕೂಡ ಲಭ್ಯವಿರಲಿದೆ. ಆದರೆ, ಕೆಲವು ತಾಂತ್ರಿಕ ಶಬ್ದಗಳು ಇಂಗ್ಲೀಷ್‌ನಲ್ಲೇ ಇರಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಹೇಳಿದ್ದಾರೆ.
Next Story





