Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮೀಸಲಾತಿ ಪ್ರಮಾಣ ಶೇ.5೦ ಮೀರುವಂತಿಲ್ಲ...

ಮೀಸಲಾತಿ ಪ್ರಮಾಣ ಶೇ.5೦ ಮೀರುವಂತಿಲ್ಲ ಎಂಬುದು ಅವೈಜ್ಞಾನಿಕ

ಮೀಸಲಾತಿ ಸಂವಾದ

ಡಾ. ಬಂಜಗೆರೆ ಜಯಪ್ರಕಾಶ್ಡಾ. ಬಂಜಗೆರೆ ಜಯಪ್ರಕಾಶ್16 Oct 2022 9:55 AM IST
share
ಮೀಸಲಾತಿ ಪ್ರಮಾಣ ಶೇ.5೦ ಮೀರುವಂತಿಲ್ಲ ಎಂಬುದು ಅವೈಜ್ಞಾನಿಕ

ಇತ್ತೀಚೆಗೆ ರಾಜ್ಯ ಸರಕಾರ ಎಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣದ ಹೆಚ್ಚಳದ ಬಗ್ಗೆ ನಿರ್ಧಾರ ಮಾಡಿದೆ.ರಾಜ್ಯದೆಲ್ಲೆಡೆ ಮೀಸಲಾತಿ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ನಾಡಿನ ಹಿರಿಯ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್ ತಮ್ಮ ಅಭಿಪ್ರಾಯವನ್ನಿಲ್ಲಿ ವ್ಯಕ್ತಪಡಿಸಿದ್ದಾರೆ.

ಈಚೆಗೆ ರಾಜ್ಯ ಸರಕಾರ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವುದು, ನಾಗಮೋಹನ್ ದಾಸ್ ಅವರ ವರದಿಯಲ್ಲಿರುವ ಮುಖ್ಯಾಂಶಗಳನ್ನು ಒಪ್ಪಿಕೊಳ್ಳುವುದು ಅನ್ನುವುದರ ಬಗ್ಗೆ ಒಂದು ನಿರ್ಣಯವನ್ನು ಪ್ರಕಟ ಮಾಡಿದೆ. ಇದು ಒಳ್ಳೆಯ ಬೆಳವಣಿಗೆ. ಸ್ವಾಗತಾರ್ಹವಾದ ಬೆಳವಣಿಗೆ. 

A


ಸಿದ್ದರಾಮಯ್ಯನವರ ಸರಕಾರದಲ್ಲಿ ನ್ಯಾ. ನಾಗಮೋಹನ್ ದಾಸ್ ಸಮಿತಿ ರಚಿಸಲಾಯಿತು. ಅದು ವರದಿ ಸಲ್ಲಿಸಿ ಮೂರು ವರ್ಷಗಳ ಮೇಲಾಗಿದೆ. ಅದರ ಬಗ್ಗೆ ಮೊದಲೇ ನಿರ್ಣಯ ಕೈಗೊಳ್ಳದೆ ಮೀನಮೇಷ ಎಣಿಸಿದ್ದ ಸರಕಾರ ಜನಾಭಿಪ್ರಾಯದ ಒತ್ತಡ ಹೆಚ್ಚಿದ ಮೇಲೆ ಒಂದು ತೀರ್ಮಾನ ಕೈಗೊಂಡಿದೆ. ಇದರ ಜೊತೆಗೆ, ಕರ್ನಾಟಕದಲ್ಲಿ ಯಾವ್ಯಾವ ಜಾತಿ ಸಮುದಾಯಗಳು ಎಷ್ಟು ಶೇಕಡಾವಾರು ಇವೆ, ಅವುಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಏನು ಇವುಗಳ ಬಗ್ಗೆ ವಿಸ್ತೃತವಾದ ವರದಿಯನ್ನು ಕೂಡ ಸಿದ್ದರಾಮಯ್ಯನವರ ಸರಕಾರವಿದ್ದಾಗಲೇ ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ಸಿದ್ಧಗೊಳಿಸಲಾಗಿದೆ. ಜಾತಿ ಜನಗಣತಿ ವರದಿ ಎಂದಿದ್ದರೂ ಅದು ಜಾತಿ ಜನಗಣತಿ ಮಾತ್ರವಾಗಿರದೆ, ಜಾತಿಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಯ ವರದಿ. ಪ್ರತೀ ಸಮುದಾಯಕ್ಕೂ ತನ್ನ ಪರಿಸ್ಥಿತಿ ಏನಿದೆ, ತನ್ನ ಜನಸಂಖ್ಯೆ ಎಷ್ಟಿದೆ, ಸರಕಾರದಲ್ಲಿ, ಆಡಳಿತದಲ್ಲಿ ತನ್ನ ಪಾಲೆಷ್ಟಿದೆ, ಪ್ರಾತಿನಿಧ್ಯ ಎಷ್ಟು ಪಡೆದಿದ್ದೇವೆ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕು ಇದೆ. ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತಯಾರಿಸಲಾಗಿರುವ ವರದಿಯನ್ನು ಈವರೆಗೂ ಸರಕಾರ ಅಂಗೀಕರಿಸಿಲ್ಲ ಅಥವಾ ಅದನ್ನು ಪಡೆದು ಮಾಹಿತಿ ಏನಿದೆ ಎನ್ನುವುದನ್ನು ಸಾರ್ವಜನಿಕಗೊಳಿಸದೆ ಇರುವುದು ವಿಷಾದನೀಯ. ಅದರಲ್ಲಿರುವ ಮಾಹಿತಿಯನ್ನು ಜನತೆಗೆ ತಿಳಿಸುವುದಕ್ಕೆ ಸರಕಾರ ಮುಂದಾಗಬೇಕಿದೆ. 


1992ರಲ್ಲಿ ಸುಪ್ರೀಂ ಕೋರ್ಟ್ ಖಾಸಗಿ ಮೊಕದ್ದಮೆಯೊಂದರ ಹಿನ್ನೆಲೆಯಲ್ಲಿ, ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಮೀರುವಂತಿಲ್ಲ ಎಂದಿದೆ. ಅದರ ಪ್ರಕಾರ ಎಸ್ಸಿ ಎಸ್ಟಿ ಸಮುದಾಯಗಳಿಗೆ ಕೊಡುವ ಮೀಸಲಾತಿ ಮಾತ್ರವಲ್ಲದೆ, ಮೀಸಲಾತಿ ಪಟ್ಟಿಯಲ್ಲಿನ ಇತರೆಲ್ಲ ವರ್ಗಗಳಿಗೆ ಕೊಡುವ ಮೀಸಲಾತಿಯೂ ಸೇರಿ ಶೇ.50ರಷ್ಟು ಮಾತ್ರ ಇರಬೇಕು. ಇದು ಅವೈಜ್ಞಾನಿಕ ಮತ್ತು ಅತಾರ್ಕಿಕ ಕೂಡ. ಯಾಕೆಂದರೆ ಮೀಸಲಾತಿ ಪಡೆಯುತ್ತಿರುವ ಜನಸಮುದಾಯಗಳ ಪ್ರಮಾಣ ಶೇ.80ನ್ನು ಮೀರುತ್ತದೆ. ಹಿಂದುಳಿದ ವರ್ಗಗಳೇ ಶೇ.65 ಎನ್ನಲಾಗುತ್ತದೆ. ಎಸ್ಸಿ ಮತ್ತು ಎಸ್ಟಿ ಸಮುದಾಯದ ಪ್ರಮಾಣ ಏನು ಎಂಬುದು ಗೊತ್ತಿದೆ. ಶೇ.75-80ರಷ್ಟಿರುವ ಸಮುದಾಯಗಳಿಗೆ ಒದಗಿಸಲಾಗಿರುವ ಮೀಸಲಾತಿ ಪ್ರಮಾಣ ಶೇ.50ನ್ನು ಮೀರಬಾರದು ಎಂದು ಹೇಳಿದರೆ ಇದರಿಂದ ಜಾತಿ ಜಾತಿಗಳ ನಡುವೆ ತಿಕ್ಕಾಟ ವಿಪರೀತವಾಗುತ್ತದೆ. ಶೇ.15 ಇರುವ ಒಂದು ಜಾತಿ ಸಮುದಾಯಕ್ಕೆ ಕೇವಲ ಶೇ.4 ಮೀಸಲಾತಿ ಒದಗಿಸಿದರೆ ಆ ಸಮುದಾಯದಲ್ಲಿನ ನೂರೆಂಟು ಜಾತಿಗಳ ಯಾವ ಪಂಗಡಗಳು ಅದನ್ನು ಪಡೆಯುವುದಕ್ಕೆ ಸಾಧ್ಯ? ಪ್ರತಿಯೊಂದು ಜಾತಿ ಗುಂಪು ಕೂಡ ಕೇವಲ ಒಂದೇ ಜಾತಿಯಿಂದ ರಚನೆಯಾಗಿಲ್ಲ. ಮೀಸಲಾತಿ ಪಟ್ಟಿಯಲ್ಲಿರುವ ಪ್ರತೀ  ವಿಭಾಗೀಕರಣದಲ್ಲೂ ಹಲವಾರು ಜಾತಿಗಳು ಸೇರಿರುವ ಒಂದು ಗುಂಪಿದೆ. ಆ ಗುಂಪುಗಳಿಗೆ ಅವುಗಳ ಶೇಕಡಾವಾರು ಪ್ರಮಾಣದ ಮೀಸಲಾತಿಯನ್ನು ಒದಗಿಸಿದಾಗ ಮಾತ್ರ ಅವುಗಳಿಗೆ ಪ್ರಾತಿನಿಧ್ಯ ದೊರಕಿದಂತಾಗುತ್ತದೆ. ಅದರ ಹೊರತಾಗಿ ಶೇ.15-20 ಇರುವವರಿಗೆ ಶೇ.4, ಶೇ.5 ಕೊಟ್ಟಾಗ ವಿನಾಕಾರಣ ಆ ಜಾತಿಗುಂಪಿನಲ್ಲಿರುವ ಬೇರೆ ಬೇರೆ ಜಾತಿ ಪಂಗಡಗಳ ನಡುವೆ ಈರ್ಷ್ಯೆ, ಸ್ಪರ್ಧೆ ಏರ್ಪಡುತ್ತದೆ. ವೈಮನಸ್ಸು ಕೂಡ ಉಂಟಾಗುತ್ತದೆ.

 ಇದಾಗಬಾರದು ಎಂದಿದ್ದರೆ ಈ ತಕ್ಷಣಕ್ಕೆ ಸಂವಿಧಾನಕ್ಕೆ ಒಂದು ತಿದ್ದುಪಡಿಯನ್ನು ತಂದು ಅಗತ್ಯವಾಗಿರುವ ಬಹುಮತವನ್ನು ಪಡೆದು ಸಂಸತ್ತಿನಲ್ಲಿ ನಿಯಮವನ್ನು ಜಾರಿಗೊಳಿಸಿ, ಶೇ.50ಕ್ಕೆ ಮೀಸಲಾತಿ ಮಿತಿಗೊಳಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ನಿಷ್ಕ್ರಿಯ ಗೊಳಿಸುವುದಕ್ಕೆ ಅಗತ್ಯವಾದ ಕ್ರಮವನ್ನು ಕೇಂದ್ರ ಸರಕಾರ ಕೈಗೊಳ್ಳಬೇಕು. ಆಗ ಮಾತ್ರ ಆಯಾ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳಿಗೆ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ನಾಅ್ಯಯ ದೊರಕಿಸಲು ಸಾಧ್ಯ. 
90ರ ದಶಕದಿಂದ ನಮ್ಮ ದೇಶದಲ್ಲಿ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ಪ್ರಕ್ರಿಯೆಗಳು ಆರಂಭವಾಗಿವೆ. ಆರ್ಥಿಕ ಕ್ಷೇತ್ರದಲ್ಲಿ ಇವುಗಳಿಂದಾಗಿ ಬಹಳ ದೊಡ್ಡ ಬದಲಾವಣೆಗಳು ಬರುತ್ತಿವೆ. ಅವುಗಳಲ್ಲಿ ಮುಖ್ಯವಾದುದೆಂದರೆ, ಹೆಚ್ಚು ಹೆಚ್ಚು ಸಾರ್ವಜನಿಕ ಕ್ಷೇತ್ರದ ಉದ್ಯಮಗಳು, ಉದ್ಯೋಗಗಳು ಖಾಸಗಿರಂಗದ ಪಾಲಾಗುತ್ತಿವೆ. ಇವತ್ತು ಖಾಸಗಿರಂಗದಲ್ಲಿ ಉದ್ಯೋಗಗಳ ಹೆಚ್ಚಳ ಆಗುತ್ತಿದೆಯೇ ಹೊರತು ಸರಕಾರಿ ವಲಯದಲ್ಲಿ ಆಗುತ್ತಿಲ್ಲ.

 ಸಾಲದ್ದಕ್ಕೆ ಈಗ ಖಾಲಿ ಇರುವ ಹುದ್ದೆಗಳನ್ನು ಕೂಡ ಸರಕಾರ ತುಂಬುತ್ತಿಲ್ಲ. ಉದ್ಯೋಗ ನೇಮಕಾತಿ ಸ್ಥಗಿತಗೊಳಿಸಿ ಹಲವು ವರ್ಷಗಳೇ ಆಗಿಹೋಗಿವೆ. ಪ್ರತೀ ಇಲಾಖೆಯಲ್ಲಿ, ಪ್ರತೀ ಸಾರ್ವಜನಿಕ ಉದ್ಯಮದಲ್ಲೂ ಕೂಡ ನೂರಾರು, ಸಾವಿರಾರು ಹುದ್ದೆಗಳು ಬಾಕಿಯಿವೆ. ಹೊಸ ಹುದ್ದೆಗಳ ನಿರ್ಮಾಣವೂ ಆಗುತ್ತಿಲ್ಲ. ಹೆಚ್ಚು ಹೆಚ್ಚು ಸಾರ್ವಜನಿಕ ಉದ್ಯಮವನ್ನು ಖಾಸಗಿಯವರಿಗೆ ವಹಿಸಿಕೊಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ನಾವು ಮೀಸಲಾತಿಯ ಮುಖಾಂತರ ವಾಗಿ ಜನಸಾಮಾನ್ಯರಿಗೆ ದಮನಿತ ಜನಸಮುದಾಯಗಳಿಗೆ ಪ್ರಾತಿನಿಧ್ಯ ಕೊಡಬೇಕೆನ್ನುವುದು ನಿಜವಾದರೆ, ಈ ಪ್ರಜಾಪ್ರಭುತ್ವ ದಲ್ಲಿ ಅವರೂ ಸಮಪಾಲು ಪಡೆಯಬೇಕು ಎಂದಾದರೆ, ಈಗ ಮುಖ್ಯವಾಗಿ ಮಾಡಬೇಕಿರುವುದು ಖಾಸಗಿ ಕ್ಷೇತ್ರದ ಉದ್ಯಮಗಳಲ್ಲೂ ಕೂಡ ಸರಕಾರದ ನೀತಿಯನುಸಾರವಾಗಿ ಆಯಾ ರಾಜ್ಯದಲ್ಲಿ ಮೀಸಲಾತಿಯನ್ನು ಒದಗಿಸಬೇಕು. 

ಹಾಗೆ ಮೀಸಲಾತಿ ಒದಗಿಸಲು ಸಿದ್ಧವಾಗುವಂಥ ಖಾಸಗಿ ಉದ್ಯಮಗಳಿಗೆ ಮತ್ತು ಖಾಸಗಿ ಸೇವಾ ನಿರತ ಸಂಸ್ಥೆಗಳಿಗೆ ಮಾತ್ರವೇ ಸರಕಾರ ಅವಕಾಶವನ್ನು ಕಲ್ಪಿಸಬೇಕು. ಇಲ್ಲಿನ ನೀರು, ವಿದ್ಯುತ್, ರಸ್ತೆ ಎಲ್ಲವನ್ನೂ ಪಡೆಯಬೇಕೆಂದಾದರೆ ಮೀಸಲಾತಿ ಒದಗಿಸಲು ಬದ್ಧರಾಗಿರಬೇಕೆಂಬ ಮುಚ್ಚಳಿಕೆ ಪಡೆಯಬೇಕು. ಆ ಪ್ರಕಾರ ಅವರು ನಡೆದುಕೊಳ್ಳುತ್ತಿದ್ದಾರೆಯೇ ಇಲ್ಲವೇ ಎಂಬುದರ ಉಸ್ತುವಾರಿಗೆ ಸಮಿತಿಯನ್ನೂ ನೇಮಿಸಿ ನ್ಯಾಯವನ್ನು ಒದಗಿಸಲು ಪ್ರಯತ್ನಿಸಬೇಕು. ಇಲ್ಲವಾದಲ್ಲಿ ಕಾಗದದ ಮೇಲೆ ಮೀಸಲಾತಿ ಪ್ರಮಾಣ ಇರುತ್ತದೆ. ಸಂವಿಧಾನದೊಳಗೆ ಮೀಸಲಾತಿ ಕೊಡಬೇಕು ಎನ್ನುವುದಿರುತ್ತದೆ. ಸರಕಾರಗಳು ಹೇಳುತ್ತಲೇ ಇರುತ್ತವೆ. ಪ್ರತಿಯೊಂದು ಸರಕಾರವೂ ಮತದಾನದ ಕಾಲ ಹತ್ತಿರ ಬಂದಾಗ ಈ ರೀತಿಯ ಆಶ್ವಾಸನೆಯನ್ನು ಕೊಡುತ್ತದೆ. ಮೀಸಲಾತಿ ಎಂಬುದು ಸುಮ್ಮನೆ ಕಣ್ಣೊರೆಸುವ ನಾಟಕವಾಗಬಾರದು ಎಂದಾದರೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನಿಗದಿಪಡಿಸಲು ದಿಟ್ಟ ಮತ್ತು ಕಠಿಣ ಕ್ರಮವನ್ನು ಸರಕಾರ ಕೈಗೊಳ್ಳಬೇಕು.

share
ಡಾ. ಬಂಜಗೆರೆ ಜಯಪ್ರಕಾಶ್
ಡಾ. ಬಂಜಗೆರೆ ಜಯಪ್ರಕಾಶ್
Next Story
X