ಪಿಟ್ ಬುಲ್ ನಾಯಿ ದಾಳಿ: ಮಹಿಳೆಯ ಕಾಲು, ಕೈ, ತಲೆಗೆ 50 ಹೊಲಿಗೆ

ಸಾಂದರ್ಭಿಕ ಚಿತ್ರ, Photo: twitter
ರೇವಾರಿ: ಹರ್ಯಾಣದ ರೇವಾರಿಯ ಬಲಿಯಾರ್ ಖುರ್ದ್ ಗ್ರಾಮದಲ್ಲಿ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳ ಮೇಲೆ ಪಿಟ್ ಬುಲ್ ನಾಯಿ ದಾಳಿ ಮಾಡಿದೆ. ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯೊಬ್ಬರ ಕಾಲು, ಕೈ ಹಾಗೂ ತಲೆಗೆ 50 ಹೊಲಿಗೆ ಹಾಕಲಾಗಿದೆ ಎಂದು ಮಹಿಳೆಯ ಕುಟುಂಬದವರು ತಿಳಿಸಿದ್ದಾರೆ.
ಶನಿವಾರ ಇಬ್ಬರು ಮಕ್ಕಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಶುಕ್ರವಾರ ಪತ್ನಿಯೊಂದಿಗೆ ಮನೆಗೆ ಬಂದಾಗ ಸಾಕು ನಾಯಿ ತನ್ನ ಹಾಗೂ ಇಬ್ಬರು ಮಕ್ಕಳ ಮೇಲೂ ದಾಳಿ ಮಾಡಿದೆ ಎಂದು ಗ್ರಾಮದ ಮಾಜಿ ಸರಪಂಚ್ ಸೂರಜ್ ಹೇಳಿದ್ದಾರೆ.
ಕಿರುಚಾಟವನ್ನು ಕೇಳಿದ ಅಕ್ಕಪಕ್ಕದವರು ನಾಯಿಯಿಂದ ಮಹಿಳೆ ಹಾಗೂ ಮಕ್ಕಳನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ನಾಯಿಯನ್ನು ಹಲವು ಬಾರಿ ಕೋಲಿನಿಂದ ಹೊಡೆದರೂ ಅದು ದಾಳಿ ನಡೆಸುವುದನ್ನು ನಿಲ್ಲಿಸಲಿಲ್ಲ ಎಂದು ಸೂರಜ್ ಹೇಳಿದ್ದಾರೆ.
Next Story





