ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ, ಡಾಲರ್ ಬಲ ಹೆಚ್ಚುತ್ತಿದೆಯಷ್ಟೇ: ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ: ರೂಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ನನಗೆ ಅನಿಸುತ್ತಿಲ್ಲ. ಆದರೆ ಅಮೆರಿಕದ ಡಾಲರ್ ಬಲಗೊಳ್ಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ Nirmala Seetharaman ಅವರು ಶನಿವಾರ ಹೇಳಿದ್ದಾರೆ.
"ಮೊದಲನೆಯದಾಗಿ ರೂಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ನನಗನಿಸುತ್ತಿಲ್ಲ ಹಾಗೂ ಡಾಲರ್ ಮೌಲ್ಯ ನಿರಂತರವಾಗಿ ಬಲಗೊಳ್ಳುತ್ತಿರುವುದನ್ನು ನೋಡುತ್ತಿದ್ದೇನೆ. ಆದ್ದರಿಂದ, ನಿಸ್ಸಂಶಯವಾಗಿ ಡಾಲರ್ ಬಲವರ್ಧನೆಯಾಗಿರುವುದರಿಂದ ಎಲ್ಲಾ ಇತರ ಕರೆನ್ಸಿಗಳು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸೀತಾರಾಮನ್ ಹೇಳಿದರು.
ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೀತಾರಾಮನ್ ಈ ವಿಷಯ ತಿಳಿಸಿದರು. ಹಣಕಾಸು ಸಚಿವರು ಅಮೆರಿಕಕ್ಕೆ ಆರು ದಿನಗಳ ಅಧಿಕೃತ ಭೇಟಿಯಲ್ಲಿದ್ದಾರೆ.
ಸ್ಥಳೀಯ ಕರೆನ್ಸಿಯು ಡಾಲರ್ ವಿರುದ್ಧ ದಾಖಲೆಯ 82.69 ಕ್ಕೆ ತಲುಪಿದ ಆರು ದಿನಗಳ ನಂತರ ರೂಪಾಯಿಗೆ ಸಂಬಂಧಿಸಿದಂತೆ ನಿರ್ಮಾಲಾ ಸೀತಾರಾಮನ್ ಅವರ ಹೇಳಿಕೆಗಳು ಬಂದಿವೆ. ಅಕ್ಟೋಬರ್ 7 ರಂದು ರೂಪಾಯಿ ಪ್ರತಿ ಡಾಲರ್‌ಗೆ 82 ರ ಗಡಿಯನ್ನು ಮೀರಿತ್ತು.
'ದಿ ಹಿಂದೂ' ಪ್ರಕಾರ, 2022 ರಲ್ಲಿ ಡಾಲರ್ ವಿರುದ್ಧ ರೂಪಾಯಿ 8 ಶೇ. ಕ್ಕಿಂತ ಹೆಚ್ಚು ಕುಸಿದಿದೆ.







