ಇನೋಳಿ ಮದ್ರಸ ಮಕ್ಕಳ ಸಾಹಿತ್ಯ ಸಂಗಮ

ಕೊಣಾಜೆ, ಅ.16: ಇನೋಳಿಯ ಅಲ್ ಮುಬಾರಕ್ ಜುಮಾ ಮಸೀದಿ ಅಧೀನದ ಇನೋಳಿ ಬಿ. ಸೈಟ್ ಮಸ್ಜಿದುರ‌್ರಹ್ಮಾನ್ ವತಿಯಿಂದ ಹಿದಾಯತುಲ್ ಇಸ್ಲಾಂ ಮದ್ರಸ ಮಕ್ಕಳ ಸಾಹಿತ್ಯ ಸಂಗಮವು ಶನಿವಾರ ನಡೆಯಿತು.
ಸಯ್ಯಿದ್ ನಿಝಾಮುದ್ದೀನ್ ಬಾಪಕಿ ತಂಳ್ ಮಲ್ಲೂರು ದುಆ ಅಶೀರ್ವಚನಗೈದರು. ಅಲ್ ಮುಬಾರಕ್ ಜುಮಾ ಮಸೀದಿಯ ಖತೀಬ್ ಐ.ಕೆ. ಅಬೂಬಕರ್ ಮದನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇನೋಳಿ ಎ.ಸೈಟ್ ಹಿದಾಯತುಲ್ ಇಸ್ಲಾಂ ಮದ್ರಸದ ಅಬ್ದುಲ್ ಅಝೀಝ್ ಹಿಷಾಮಿ, ಬಶೀರ್ ಹನೀಫಿ, ಕುಂಞಿ ಅಹ್ಮದ್ ಮುಸ್ಲಿಯಾರ್, ಅಲ್-ಮುಬಾರಕ್ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಚಕ್ಕರ್, ಪ್ರಧಾನ ಕಾರ್ಯದರ್ಶಿ ಟಿ.ಎಚ್.ಅಬ್ಬಾಸ್, ಕಾರ್ಯದರ್ಶಿ ಮುಹಮ್ಮದ್ ಅನ್ಸಾರ್, ಲೆಕ್ಕ ಪರಿಶೋಧಕ ಸಮದ್ ಮುಕ್ರಿ, ಸದಸ್ಯರಾದ ಅಕ್ರಂ ಇನೋಳಿ, ಇಕ್ಬಾಲ್ ಕಕ್ಕೆಬೆಟ್ಟು, ಮಸ್ಜಿದುರ‌್ರಹ್ಮಾನ್ ಮತ್ತು ಹಿದಾಯತುಲ್ ಇಸ್ಲಾಂ ಮದ್ರಸದ ಅಧ್ಯಕ್ಷ ಟಿ.ಎಚ್.ನಝೀರ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಹುಸೈನ್ ಬಾವು ಸ್ವಾಗತಿಸಿದರು. ಮದ್ರಸ ಅಧ್ಯಾಪಕ ಅಶ್ರಫ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.
Next Story