ಉಳ್ಳಾಲ ಮುಹಿಯ್ಯಾ ಶರೀಅತ್ ಕಾಲೇಜಿನ ಸನದು ಪ್ರದಾನ

ಉಳ್ಳಾಲ, ಅ.16: ಧಾರ್ಮಿಕ ಶಿಕ್ಷಣ ಪಡೆಯಲು ಸ್ಥಳೀಯರು ಮುಂದೆ ಬಂದರೆ ಈ ಪ್ರದೇಶದಿಂದಲೇ ವಿದ್ವಾಂಸರ ಸೃಷ್ಟಿ ಸಾಧ್ಯ. ಆದರೆ ತಾವು ಕಲಿತವರು ಎನ್ನುವ ಅಹಂಭಾವ ಬಂದರೆ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.
ಉಳ್ಳಾಲ ಮೇಲಂಗಡಿ ಜುಮ್ಮಾ ಮಸೀದಿಯ ಆಶ್ರಯದಲ್ಲಿ ಮಸೀದಿಯ ವಠಾರದಲ್ಲಿ ನಡೆದ ಮುಹಿಯ್ಯಾ ಶರೀಅತ್ ಕಾಲೇಜಿನ ಸನದು ಪ್ರದಾನ ಮತ್ತು ಮೀಲಾದ್ ಫೆಸ್ಟ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೇಲಂಗಡಿ ಜುಮ್ಮಾ ಮಸೀದಿಯ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಮುಹಿಯುದ್ದೀನ್ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಫಾರೂಕ್ ಉಳ್ಳಾಲ್ ಮಾತನಾಡಿದರು.
ಮಸೀದಿಯ ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ಕೋಶಾಧಿಕಾರಿ ರಶೀದ್ ಮುಹಮ್ಮದ್, ಕಬೀರ್ ಬುಖಾರಿ, ಮಾಲಿಕ್ ಹಮೀದ್ ಉಪಸ್ಥಿತರಿದ್ದರು.
Next Story





