ವಳಚ್ಚಿಲ್ ಪದವು: ನವೀಕೃತ ಮಸೀದಿಯ ಉದ್ಘಾಟನೆ

ಮಂಗಳೂರು, ಅ.16: ವಳಚ್ಚಿಲ್ ಪದವು ಅಲ್ ಬದ್ರಿಯಾ ಜುಮಾ ಮಸೀದಿಯ ನವೀಕೃತ ಮಸೀದಿಯ ಉದ್ಘಾಟನೆ ಹಾಗೂ ವಕ್ಫ್ ನಿರ್ವಹಣೆಯನ್ನು ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಅಲ್ ಅಝ್ಹರಿ ನೆರವೇರಿಸಿದರು.
ಈ ಸಂದರ್ಭ ಇರ್ಶಾದ್ ದಾರಿಮಿ ಮಿತ್ತಬೈಲ್, ಖತೀಬ್ ಅಬ್ದುಲ್ ಲತೀಫ್ ಹನೀಫಿ, ಮಸೀದಿಯ ಅಧ್ಯಕ್ಷ ಶಬೀರ್, ಪ್ರಧಾನ ಕಾರ್ಯದರ್ಶಿ ಮುಸ್ತಾಕ್, ಉಪಾಧ್ಯಕ್ಷ ಎ.ಬಿ. ಅಬ್ದುಲ್ ರಹ್ಮಾನ್, ಸದರ್ ಮುಅಲ್ಲಿಂ ಫಾರೂಕ್ ಫೈಝಿ, ಮುಅಲ್ಲಿಂ ಸಿರಾಜುದ್ಧೀನ್ ಮದನಿ, ಎಸ್ಕೆಎಸೆಸ್ಸೆಫ್ ವಳಚ್ಚಿಲ್ ಪದವು ಅಧ್ಯಕ್ಷ ದಾವೂದ್ ಐಫಾ, ಎಸ್ಕೆಎಸೆಸ್ಸೆಫ್ ನಝೀರ್ ವಳಚ್ಚಿಲ್ ಉಪಸ್ಥಿತರಿದ್ದರು.
Next Story