ಮಣಿಪಾಲದಲ್ಲಿ ಸಂಸ್ಕೃತಿ ಸಂಜೆ ಕಾರ್ಯಕ್ರಮ

ಮಣಿಪಾಲ, ಅ.16: ಸಂಸ್ಕೃತಿ ಪ್ರತಿಷ್ಠಾನ ಉಡುಪಿ, ನಡುಮನೆ ಸಾಹಿತ್ಯ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಂಯುಕ್ತ ಆಶಯದಲ್ಲಿ ಸಂಸ್ಕೃತಿ ಸಂಜೆ ಕಾರ್ಯಕ್ರಮವು ಮಣಿಪಾಲದ ತಪೋವನದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಕವನ ವನ್ನು ವಾಚಿಸುವ ಮೂಲಕ ಉದ್ಘಾಟಿಸಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಸುಹಾಸಂ ಕಾರ್ಯದರ್ಶಿ ಕು.ಗೋ, ಕಾರ್ಯಕ್ರಮದ ಸಂಚಾಲಕಿ ಸಂಧ್ಯಾ ಶೆಣೈ, ಶ್ರೀನಿವಾಸ್ ಉಪಾಧ್ಯ, ತಪೋವನದ ಮುಖ್ಯಸ್ಥೆ ರೇವತಿ ನಾಡಿಗೇರ್, ತಾಲ್ಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ., ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.
ಸಾಹಿತಿಗಳು ಕಲಾವಿದರು ಕಲಾಪ್ರೇಕ್ಷಕರು ಕಾರ್ಯಕ್ರಮದಲ್ಲಿ ಮಾತುಕತೆ, ಸಂವಾದ, ಹಾಡು, ಏಕಪಾತ್ರ ಅಭಿನಯ, ಕವನ ವಾಚನ, ಕಥಾ ವಚನದ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡರು.





