ಗುರು ಬೆಳದಿಂಗಳು ಫೌಂಡೇಶನ್‌ನಿಂದ ಮನೆ ಹಸ್ತಾಂತರ
ಮಂಗಳೂರು, ಅ.16: ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜನ್ಮದಿನದ ನೆನಪಿನಲ್ಲಿ ಗುರುಬೆಳದಿಂಗಳು ಫೌಂಡೇಶನ್ ಕುದ್ರೋಳಿ ಇದರ ವತಿಯಿಂದ ಬೆಂಜನಪದವು ರಾಮನಗರ ನಿವಾಸಿ ಭವಾನಿ ರವೀಂದ್ರ ಅವರ ಕುಟುಂಬಕ್ಕೆ ನವೀಕರಣಗೊಳಿಸಿದ ಮನೆ ಹಸ್ತಾಂತರ ಕಾರ್ಯಕ್ರಮವು ರವಿವಾರ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್. ಕಳೆದ ಒಂದುವರೆ ವರ್ಷದಲ್ಲಿ ಗುರುಬೆಳದಿಂಗಳು ಫೌಂಡೇಶನ್ ಮೂಲಕ ಶಿಕ್ಷಣ, ಆರೋಗ್ಯ, ಆಸರೆ ವಿಭಾಗದಲ್ಲಿ 67.40 ಲಕ್ಷ ರೂ. ವೆಚ್ಚದಲ್ಲಿ ಸಮಾಜಮುಖಿ ಕಾರ್ಯನಡೆಸಲಾಗಿದೆ. ಜಾತಿ, ಮತ, ಭೇದವಿಲ್ಲದೆ ಸಮಾಜದ ಎಲ್ಲ ವರ್ಗದ ಜನರ ಜತೆಗೆ ಸಂಸ್ಥೆ ಇರುತ್ತದೆ ಎಂದರು.
ಸಾಮಾಜಿಕ ಕಾರ್ಯಕರ್ತೆ ಉಷಾ ಮರೋಳಿ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಉದ್ಯಮಿಗಳಾದ ಕಿಶೋರ್ ದಂಡೆಕೇರಿ, ಶ್ರೀನಿವಾಸ ಕೂಳೂರು, ವಿಷ್ಣುದಾಸ್, ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಸಜಿಪ, ಗೆಜ್ಜೆಗಿರಿ ಕ್ಷೇತ್ರದ ಉಪಾಧ್ಯಕ್ಷ ರವಿ ಚಿಲಿಂಬಿ, ವಕ್ತಾರ ರಾಜೇಂದ್ರ ಚಿಲಿಂಬಿ, ಗುರುಬೆಳದಿಂಗಳು ಫೌಂಡೇಶನ್ ಉಪಾಧ್ಯಕ್ಷ ರಘುನಾಥ ಮಾಬಿಯಾನ್, ಕಾರ್ಯದರ್ಶಿ ರಾಜೇಶ್ ಸುವರ್ಣ ಬಂಟ್ವಾಳ ಉಪಸ್ಥಿತರಿದ್ದರು.
ಗಜೇಂದ್ರ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಸುಮಾಕರ್ ಕಾರ್ಯಕ್ರಮ ನಿರೂಪಿಸಿದರು. ಬಾಲಚಂದ್ರ ವಂದಿಸಿದರು.
ಸ್ವ ಉದ್ಯೋಗ ತರಬೇತಿ
ಈ ಸಂದರ್ಭ ಕ್ಯಾಂಡಲ್ ತಯಾರಿ ಬಗ್ಗೆ ವನಿತಾ ಎಸ್., ದೀಪದ ಬತ್ತಿ ತಯಾರಿ ಬಗ್ಗೆ ಅನಿಲ್ ಕುಮಾರ್ ಕದ್ರಿ ಪ್ರಾತಕ್ಷಿಕೆ ಮೂಲಕ ಸ್ವ ಉದ್ಯೋಗ ಕಾರ್ಯಾಗಾರ ನಡೆಸಿಕೊಟ್ಟರು.
ಅಶಕ್ತರಿಗೆ ಔಷಧ ವಿತರಣೆ, ಫಲಾನುಭವಿಗಳಾದ ಶೃತಿ ಸಂಜೀವ ಶೆಟ್ಟಿ, ಮನೋಹರ್ ಆನಂದ, ಸುರೇಖಾ, ಸವಿತಾ ನಾರಾಯಣ, ಪವಿತ್ರಾ ನಾರಾಯಣ ಕುಟುಂಬಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.