ಲೋಕಾಯುಕ್ತಕ್ಕೆ ಇನ್ಸ್ ಪೆಕ್ಟರ್ ಗಳ ಭರ್ತಿ
ಬೆಂಗಳೂರು, ಅ.16: ಕರ್ನಾಟಕ ಲೋಕಾಯುಕ್ತದ ಕಾರ್ಯಾಚರಣೆ ಚುರುಕುಗೊಂಡಿರುವ ಹಿನ್ನೆಲೆ ಭ್ರಷ್ಟಾಚಾರ ನಿಗ್ರಹ ದಳದಲ್ಲಿದ್ದ ಒಂಭತ್ತು ಇನ್ಸ್ ಪೆಕ್ಟರ್ ಗಳನ್ನು ಇಲ್ಲಿಗೆ ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಒಂಭತ್ತು ಇನ್ಸ್ ಪೆಕ್ಟರ್ (ಸಿವಿಲ್)ಗಳನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿದರೆ, ಮೂವರು ಇನ್ಸ್ ಪೆಕ್ಟರ್ ಗಳನ್ನು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ವರ್ಗಾಯಿಸಲಾಗಿದೆ.
ಅದೇ ರೀತಿ, 12 ಡಿವೈಎಸ್ಪಿ ಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ.
Next Story