ಕಲಾವಿದರಿಗೆ ಸರ್ಪಂಗಳ ಯಕ್ಷೋತ್ಸವ ಪ್ರಶಸ್ತಿ ಪ್ರದಾನ

ಉಡುಪಿ: 11ನೆ ವರ್ಷದ ಸರ್ಪಂಗಳ ಯಕ್ಷೋತ್ಸವವು ಅ.15 ರಂದು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಸಂಪನ್ನಗೊಂಡಿತು.
ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ಕಲಾ ಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ಯಕ್ಷಗಾನ ಸಾಧಕ ಪ್ರಶಸ್ತಿ ಯನ್ನು ತೆಂಕುತಿಟ್ಟಿನ ಹಿರಿಯ ಭಾಗವತ, ಮದ್ದಲೆ ವಾದಕ ಪದ್ಯಾಣ ಜಯ ರಾಮ ಭಟ್ ಅವರಿಗೆ ಮತ್ತು ಸಪರ್ಂಗಳ ಕಲಾ ಪೋಷಕ ಪುರಸ್ಕಾರವನ್ನು ಕಟೀಲು ಮೇಳದ ಹಿರಿಯ ನೇಪಥ್ಯ ಕಲಾವಿದ ಬಡಕ್ಕೋಡಿ ಪುತ್ತು ನಾಯ್ಕ ಅವರಿಗೆ ಪ್ರದಾನ ಮಾಡಿದರು.
ಯಕ್ಷಗಾನಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಸಪರ್ಂಗಳ ಸುಬ್ರಹ್ಮಣ್ಯ ಭಟ್ಟರ ಸಂಸ್ಮರಣ ಭಾಷಣ ಮಾಡಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರರಾವ್, ಸಪರ್ಂಗಳ ಪ್ರಶಸ್ತಿಯ ಪ್ರವರ್ತಕರಾದ ನಳಿನಿ ಸುಬ್ರಹ್ಮಣ್ಯ ಭಟ್, ಡಾ.ಶೈಲಜಾ ಎಸ್., ಡಾ.ನರೇಂದ್ರ ಶೆಣೈ, ಪದ್ಯಾಣ ಜಯರಾಮ ಭಟ್ಟರ ಪತ್ನಿ ಸುಮಂಗಲಾ ಉಪಸ್ಥಿತರಿದ್ದರು.
ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಹನುಮೋದ್ಭವ- ವಾರಣಾಧ್ವರ ಎಂಬ ಕಥಾನಕದ ಪ್ರದರ್ಶನ ನಡೆಯಿತು.
Next Story





