ಕಿನ್ಯ: ಶೈಖುನಾ ಉಸ್ಮಾನುಲ್ ಫೈಝಿ ಉಸ್ತಾದರ ಅಭಿನಂದನಾ ಕಾರ್ಯಕ್ರಮ

ಉಳ್ಳಾಲ: ಎಸ್ಐಸಿ, ಎಸ್ ವೈ ಎಸ್, ಎಸ್ಕೆಎಸ್ ಎಸ್ ಎಫ್, ಎಸ್ ಬಿವಿ ಕಿನ್ಯ ಇದರ ಆಶ್ರಯದಲ್ಲಿ ಮರ್ಹೂಂ ಹುಸೈನ್ ಕುಂಞಿ ಹಾಜಿ ಚಾಯರ್ ವಳಚ್ಚಿಲ್ ರವರ ಅನುಸ್ಮರಣಾ ಕಾರ್ಯಕ್ರಮ ಹಾಗೂ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ನೂತನ ಸದಸ್ಯರಾಗಿ ಆಯ್ಕೆಯಾದ ಶೈಖುನಾ ಉಸ್ಮಾನುಲ್ ಫೈಝಿ ಉಸ್ತಾದರ ಅಭಿನಂದನಾ ಕಾರ್ಯಕ್ರಮವು ಕಿನ್ಯ ಸಿ.ಎಚ್ ನಗರದಲ್ಲಿ ಸಮಸ್ತ ಇಸ್ಲಾಮಿಕ್ ಸೆಂಟರ್ ಇದರ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಉಸ್ಮಾನುಲ್ ಫೈಝಿ ತೋಡಾರ್ ಉದ್ಘಾಟಿಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರೂ, ಕೂರ್ನಡ್ಕ ಖಾಝಿಯೂ ಆದ ಶೈಖುನಾ ಬಂಬ್ರಾಣ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಿದರು, ಸಮಸ್ತ ಮುಖಂಡರಾದ ತಬೂಕ್ ದಾರಿಮಿ, ಕಾಸಿಂ ದಾರಿಮಿ ಸವಣೂರು, ಸ್ಥಳೀಯ ಮುದರ್ರಿಸ್ ಅಬ್ದುಲ್ ಮಜೀದ್ ದಾರಿಮಿ, ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಮಾತನಾಡಿದರು.
ಮುಫತ್ತಿಷ್ ಉಮರ್ ದಾರಿಮಿ ಸಾಲ್ಮರ,ಅಲಿ ದಾರಿಮಿ,ಎಮ್ ಎನ್ ಉಸ್ತಾದ್ ಕಿನ್ಯ, ಜಮಾಅತಿನ ಕೋಶಾಧಿಕಾರಿ ಬಾವುಚ್ಚ ಸಾಗ್, ದೇರಳಕಟ್ಟೆ ರೇಂಜ್ ಮೆನೇಜ್ ಮೆಂಟ್ ಉಪಾಧ್ಯಕ್ಷ ಸ್ವಾಗತ್ ಅಬೂಬಕ್ಕರ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಇಸ್ಲಾಮಿಕ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಸ್ತಫ ಫೈಝಿ ಕಿನ್ಯ ಸ್ವಾಗತಿಸಿ ನಿರೂಪಿಸಿದರು.








