ಮರ್ಹೂಂ ಯು.ಕೆ. ಸೈಯದ್ ಸ್ಮರಣಾರ್ಥ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ

ಮಂಗಳೂರು, ಅ.17: ಸೈಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಕೋಟೆಪುರ ಟಿಪ್ಪುಸುಲ್ತಾನ್ ಸಂಸ್ಥೆಯಲ್ಲಿ ಮರ್ಹೂಂ ಯು.ಕೆ. ಸೈಯ್ಯದ್ ಸ್ಮರಣಾರ್ಥ ನಿರ್ಮಾಣಗೊಳ್ಳಲಿರುವ ಆಂಗ್ಲ ಮಾಧ್ಯಮ ಶಾಲಾ ಕಟ್ಟಡಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಲಾಯಿತು.
ಉದ್ಯಮಿ ಹಮೀದ್ ಸೈಯದ್ ಕಟ್ಟಡಕ್ಕೆ ಶಿಲಾನ್ಯಾಸಗೈದರು. ಕೋಟೆಪುರ ಜುಮ್ಮಾ ಮಸೀದಿಯ ಖತೀಬ್ ಇರ್ಷಾದ್ ಸಖಾಫಿ ದುಆಗೈದರು.
ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುರ‌್ರಶೀದ್ ಮಾತನಾಡಿ ಸ್ಥಳೀಯ ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕೋಟೆಪುರದಲ್ಲಿ ಆರಂಭಗೊಂಡ ಕನ್ನಡ ಮಾಧ್ಯಮ ಶಾಲೆಯು ಕಾಲಕ್ಕೆ ಅನುಗುಣವಾಗಿ ಆಂಗ್ಲಮಾಧ್ಯಮವಾಗಿ ಬದಲಾಗುತ್ತಿದೆ. ಇದಕ್ಕೆ ಬೇಕಾದ ಕಟ್ಟಡ ದಾನದ ರೂಪದಲ್ಲಿ ನೀಡುವ ಮೂಲಕ ಉದ್ಯಮಿ ಹಮೀದ್ ಸೈಯದ್ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ ಎಂದರು.
ದರ್ಗಾ ಉಪಾಧ್ಯಕ್ಷರಾದ ಮೋನು ಇಸ್ಮಾಯಿಲ್, ಬಾವಾ ಮೊಹಮ್ಮದ್, ಶಾಲೆಯ ಮಾಜಿ ಸಂಚಾಲಕ ಅಬ್ಬಾಸ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಇಬ್ರಾಹೀಂ ಕಕ್ಕೆತೋಟ, ಅರಬಿಕ್ ಟ್ರಸ್ಟ್ ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಕೇಂದ್ರ ಜುಮ್ಮಾ ಮಸೀದಿಯ ಸದಸ್ಯರಾದ ಹಸೈನಾರ್, ಅಬ್ದುಲ್ ರಹ್ಮಾನ್, ಹಮ್ಮಬ್ಬ, ಕೋಟೆಪುರ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ಬಾಸ್, ಉಪಾಧ್ಯಕ್ಷ ಅಬೂಬಕ್ಕರ್, ನಗರಸಭಾ ಸದಸ್ಯ ರಮೀಝ್, ಹನೀಫ್ ಕೋಡಿ, ಶರಾಫತ, ಇಬ್ರಾಹಿಂ, ಎಸ್. ಅಬೂಬಕ್ಕರ್, ಸಿನಾನ್, ಖಾದರ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಎಂ.ಎಚ್. ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿತ್ರಕಲಾ ಶಿಕ್ಷಕ ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.