ಪುತ್ತೂರು: ಕಳವು ಪ್ರಕರಣ; ಆರೋಪಿ ಸೆರೆ
ಪುತ್ತೂರು: ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 2021ನೇ ಜುಲೈ ತಿಂಗಳಿನಲ್ಲಿ ಕೆಯ್ಯೂರು ಗ್ರಾಮದ ಕಟ್ಟತ್ತಾರು, ಕೆಯ್ಯೂರು, ಮಾಡಾವು ಪರಿಸರದಲ್ಲಿ ಸರಣಿ ಮನೆ ಕಳ್ಳತನ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.
ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್‌ಐ ಉದಯ ರವಿ.ಎಂ.ವೈ ಮತ್ತು ರಾಮಕೃಷ್ಣ, ರವರ ನೇತೃತ್ವದ ತಂಡ ಕಣ್ಣೂರು ಜಿಲ್ಲೆಯ ಆರೋಪಿ ಮಹಮ್ಮದ್ ಕೆ.ಯು (42) ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿಯು ಕಳೆದ ವರ್ಷ ಬೆಳ್ಳಾರೆ ಠಾಣಾ ವ್ಯಾಪ್ತಿಯ ಸವಣೂರು ಹಾಗೂ ಬೆಳಂದೂರಿನ ಪಳ್ಳತ್ತಾರು ಪರಸರಗಳಲ್ಲಿ ಮನೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಈತನಿಂದ ಸುಮಾರು 2,50,000 /- ರೂ ಮೌಲ್ಯದ ಚಿನ್ನಾಭರಣ ಹಾಗೂ ಕಳವುಗೈದ ಮೋಟಾರು ಸೈಕಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಅಲ್ಲದೇ ಈತನು ಕೊಣಾಜೆ, ವಿಟ್ಲ, ಬಂಟ್ವಾಳ, ಪುಂಜಾಲಕಟ್ಟೆ ಪರಸರಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಈತನ ವಿರುದ್ಧ ಈಗಾಗಲೇ ಕೇರಳ ರಾಜ್ಯದಲ್ಲಿ 120 ಕ್ಕಿಂತಲೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.