ಆಶಿಷ್ ಮಿಶ್ರಾ ಜಾಮೀನು ಅರ್ಜಿಗೆ ಉತ್ತರಿಸಲು ಉತ್ತರಪ್ರದೇಶ ಸರಕಾರಕ್ಕೆ ಎರಡು ವಾರ ಸಮಯ ನೀಡಿದ ಸುಪ್ರೀಂ
ಲಖಿಂಪುರ ಖೇರಿ ಹಿಂಸಾಚಾರ

ಹೊಸದಿಲ್ಲಿ,ಅ.17: ಸರ್ವೋಚ್ಚ ನ್ಯಾಯಾಲಯವು ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ,ಕೇಂದ್ರ ಸಚಿವ ಅಜಯ ಮಿಶ್ರಾ(Union Minister Ajay Mishra)ರ ಪುತ್ರ ಆಶಿಷ್ ಮಿಶ್ರಾ(Ashish Mishra) ಸಲ್ಲಿಸಿರುವ ಜಾಮೀನು ಅರ್ಜಿಗೆ ಉತ್ತರಿಸಲು ಉತ್ತರ ಪ್ರದೇಶ ಸರಕಾರಕ್ಕೆ ಸೋಮವಾರ ಇನ್ನೂ ಎರಡು ವಾರಗಳ ಸಮಯಾವಕಾಶವನ್ನು ಮಂಜೂರು ಮಾಡಿದ್ದು,ವಿಚಾರಣೆಯನ್ನು ನ.7ಕ್ಕೆ ಮುಂದೂಡಿದೆ.
ತನಗೆ ಜಾಮೀನು ನಿರಾಕರಿಸಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯದ ಜು.26ರ ಆದೇಶವನ್ನು ಆಶಿಷ್ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.
ಈ ಹಿಂದೆ ಆಶಿಷ್ ಅರ್ಜಿಗೆ ಸಂಬಂಧಿಸಿದಂತೆ ಉ.ಪ್ರ.ಸರಕಾರಕ್ಕೆ ನೋಟಿಸ್ ಹೊರಡಿಸಿದ್ದ ಸರ್ವೋಚ್ಚ ನ್ಯಾಯಾಲಯವು ಸೆ.26ರೊಳಗೆ ಉತ್ತರಿಸುವಂತೆ ಸೂಚಿಸಿತ್ತು.
Next Story





