ಮಹಿಳೆ ನಾಪತ್ತೆ: ದೂರು ದಾಖಲು

ಮಂಗಳೂರು, ಅ.17: ನಗರದ ಜಪ್ಪಿನಮೊಗರು ಪ್ರಜ್ಞಾ ಸ್ವಾಧಾರ ಗೃಹದಲ್ಲಿ ಉಳ್ಳಾಲ ಪೊಲೀಸರು 2021ರ ಅಕ್ಟೋಬರ್ 12ರಂದು ದಾಖಲಿಸಿದ್ದ ಸರೋಜಾ ಬಾಯಿ (40) ಎಂಬಾಕೆ ಅ.13ರಿಂದ ಕಾಣೆಯಾಗಿದ್ದಾರೆ.
ಗೋಧಿ ಮೈಬಣ್ಣ, 5.1 ಅಡಿ ಎತ್ತರ, ದಪ್ಪಶರೀರ, ದುಂಡು ಮುಖ, ಕಪ್ಪು ತಲೆ ಕೂದಲು (ಬಾಬ್ ಕಟ್) ಹಾಗೂ ಕಂದು ಬಣ್ಣದ ಚೂಡಿದಾರ, ಹಳದಿ ಪ್ಯಾಂಟ್, ಹಳದಿ ಬಣ್ಣದ ದುಪ್ಪಟ್ಟ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.
ಈಕೆಯ ಬಗ್ಗೆ ಮಾಹಿತಿ ದೊರೆತಲ್ಲಿ ದೂ.ಸಂ:0824-2220529, 0824-2220800, ಠಾಣಾಧಿಕಾರಿ ಮೊ.ನಂ:9480805354 ಅಥವಾ ಕಂಕನಾಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story