ವ್ಯಕ್ತಿ ನಾಪತ್ತೆ: ದೂರು ದಾಖಲು

ಮಂಗಳೂರು, ಅ.17: ತಮಿಳುನಾಡಿನ ಸೇಲಂನಿಂದ ನಗರಕ್ಕೆ ಮಣ್ಣಿನ ದೀಪಗಳ ಮಾರಾಟಕ್ಕೆಂದು ಬಂದಿದ್ದ ಮಾಯಾವೇಳ್ ಪೆರಿಯಸಾಮಿ (52) ಎಂಬವರು ನಾಪತ್ತೆಯಾಗಿದ್ದಾರೆ.
ಮಾಯಾವೇಳ್ ಮತ್ತಾತನ ಪತ್ನಿ ಅ.14ರಂದು ಕುದ್ರೋಳಿಯ ಅಳಕೆ ಮಾರ್ಕೆಟ್ ಬಳಿ ಮಣ್ಣಿನ ದೀಪಗಳನ್ನು ಮಾರಾಟ ಮಾಡಿಕೊಂಡಿದ್ದರು. ಸಂಜೆ ಮಾಯಾವೇಳ್‌ಗೆ ಪರಿಚಯದ ರವಿ ಎಂಬಾತನು ತನ್ನ ಪರಿಚಯದ ವ್ಯಕ್ತಿಗೆ ಸುಮಾರು 20 ಚೀಲ ಮಣ್ಣಿನ ದೀಪ ಬೇಕೆಂದು ಕೇಳಿದ್ದರು ಎನ್ನಲಾಗಿದೆ. ಈ ಬಗ್ಗೆ ಚರ್ಚಿಸಲು ಮಾಯಾವೇಳ್ ಮತ್ತು ರವಿ ಜತೆಯಾಗಿ ಹೋಗಿದ್ದು, ಬಳಿಕ ವಾಪಸಾಗಿಲ್ಲ. ಇಬ್ಬರ ಮೊಬೈಲ್‌ಪೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
೫.೨ ಅಡಿ ಎತ್ತರ, ಕಪ್ಪು ಮೈಬಣ್ಣ, ಸಪೂರ ಶರೀರ, ಕಪ್ಪು ತಲೆ ಕೂದಲು, ಕಪ್ಪು ಮತ್ತು ಬಿಳಿ ಮಿಶ್ರಿತ ಕುರುಚಲು ಗಡ್ಡ, ಮೀಸೆ ಹೊಂದಿದ್ದಾರೆ. ಮಾಹಿತಿ ದೊರೆತವರು ಬಂದರು ಪೊಲೀಸ್ ಠಾಣೆ (0824-2220516) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
Next Story