'ಕನ್ನಡ ಮಾತನಾಡುವ ಸಿಬ್ಬಂದಿ ಟಾರ್ಗೆಟ್': ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಎಡಿಜಿಪಿಗೆ ನೀಡಿದ ದೂರಿನ ಪತ್ರ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಡಿಸಿಪಿ ಪರ ಅಭಿಯಾನ

ಡಿಸಿಪಿ ನಿಶಾ ಜೇಮ್ಸ್
ಬೆಂಗಳೂರು, ಅ.17: ಕನ್ನಡ ಮಾತನಾಡುವ ಸಿಬ್ಬಂದಿಯನ್ನು ಗುರಿಯಾಗಿಸಿದ್ದಾರೆ ಸೇರಿದಂತೆ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಅವರ ವಿರುದ್ಧ ಆರೋಪಗಳ ಸುರಿಮಳೆಯೇ ಗೈದಿರುವ ದೂರಿನ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮತ್ತೊಂದೆಡೆ ಹಲವು ಪೊಲೀಸ್ ಸಿಬ್ಬಂದಿ ಡಿಸಿಪಿ ಬೆಂಬಲಿಸಿ ಅಭಿಯಾನ ಕೈಗೊಂಡಿದ್ದಾರೆ.
ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ಕೆಲ ಸಿಬ್ಬಂದಿ ಆರೋಪ ಮಾಡಿದ್ದು, ಈ ಸಂಬಂಧ 32 ಪುಟುಗಳ ದೂರಿನ ಪತ್ರವೊಂದನ್ನು ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಎ.ಸಲೀಂ ಅವರಿಗೆ ಸಲ್ಲಿಸಲಾಗಿದೆ.
ಸೆ.3ರಂದು ಎಡಿಜಿಪಿಗೆ ನೀಡಿದ್ದ ದೂರಿನ ಪ್ರತಿ ಸಲ್ಲಿಸಿದ್ದು, ನಿಶಾ ಜೇಮ್ಸ್ ಅವರು ಉದ್ದೇಶ ಪೂರಕವಾಗಿ ಸಾಮಾನ್ಯ ವಿಷಯಗಳನ್ನ ದೊಡ್ಡದಾಗಿ ಮಾಡಿ ಕಾನೂನು ಬಾಹಿರ ಶಿಸ್ತು ಕ್ರಮಕ್ಕೆ ಮುಂದಾಗುತ್ತಾರೆ.ಸಿಬ್ಬಂದಿಗಳನ್ನು ತಡರಾತ್ರಿವರೆಗೂ ಕಚೇರಿಯಲ್ಲಿಯೇ ಉಳಿಸಿಕೊಳ್ಳುತ್ತಾರೆ ಎಂದು ಆಪಾದಿಸಿದ್ದಾರೆ.
ಸಂಜೆ 6ರ ನಂತರ ಕೆಲಸ ಶುರು ಮಾಡಿ ರಾತ್ರಿ 3ಕ್ಕೆ ಮುಗಿಸುತ್ತಾರೆ. ಇದರಿಂದ ಪತ್ನಿ ಮಕ್ಕಳು ಪೋಷಕರ ಜೊತೆ ಸಮಯ ಕಳೆಯಲು ಆಗುತ್ತಿಲ್ಲ.ಇನ್ನೂ, ನಿದ್ರಾಹೀನತೆಯಿಂದ ಮರೆವು ಸೇರಿದಂತೆ ಹಲವು ಕಾಯಿಲೆ ಬರುತ್ತಿವೆ. ಅಷ್ಟೇ ಅಲ್ಲದೆ, 25 ಸಿಬ್ಬಂದಿಗೆ ವೇತನ ಭಡ್ತಿಯನ್ನು ತಡೆ ಹಿಡಿದಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಕನ್ನಡದಲ್ಲಿ ವ್ಯವಹರಿಸುವುದಿಲ್ಲ, ಕನ್ನಡ ಮಾತಾಡುವ ಸಿಬ್ಬಂದಿಯನ್ನು ತುಚ್ಛವಾಗಿ ಕಾಣುತ್ತಾರೆ ಗಂಭೀರ ಆರೋಪ ಮಾಡಿ, ಹಲವು ಸಿಬ್ಬಂದಿ ಈ ಪತ್ರದಲ್ಲಿ ಸಹಿ ಮಾಡಿ, ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದಾರೆ.
ಬೆಂಬಲ: ಇನ್ನೂ, ಈ ಪತ್ರ ವೈರಲ್ ಬೆನ್ನಲ್ಲೇ ಹಲವು ಪೊಲೀಸ್ ಸಿಬ್ಬಂದಿ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ತಮ್ಮ ವಾಟ್ಸಪ್ ಸ್ಟೇಟಸ್ನಲ್ಲೂ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂದು
Madam Nisha James IPS is a really very honest and loyal police officer i have seen.
— Abdul Samad (@Abdul9599) October 17, 2022
We will always take stand and support officers like madam at any point of situation. #DCPAdmin #IPS pic.twitter.com/5vZLvpo2Ah
She is honest in administration. Bribery free administration system has been implemented. So they made accusations against her. The vile allegations leveled against her personally are proof that the system has not improved. #nishajames #ips pic.twitter.com/3MPQkQOmTT
— freedomofspeech (@freedom03851326) October 17, 2022







