ಭೀಮಾ ಕೋರೆಗಾಂವ್ ಪ್ರಕರಣ: ಜ್ಯೋತಿ ಜಗತಾಪ್ ಜಾಮೀನು ಅರ್ಜಿ ತಿರಸ್ಕೃತ

Photo: twitter(Kabir Kala Manch)
ಮುಂಬೈ, ಅ. 17: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಗಳಲ್ಲಿ ಓರ್ವರಾದ ಸಾಮಾಜಿಕ ಹೋರಾಟಗಾರ್ತಿ ಜ್ಯೋತಿ ಜಗತಾಪ್ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ. ಸಾಂಸ್ಕೃತಿಕ ಸಂಘಟನೆ ‘ಕಬೀರ್ ಕಲಾ ಮಂಚ್’ನ ಸದಸ್ಯರಾಗಿರುವ ಜಗತಾಪ್ ಅವರು ೨೦೨೦ ಸೆಪ್ಟಂಬರ್ನಿಂದ ಕಾರಾಗೃಹದಲ್ಲಿ ಇದ್ದಾರೆ.
ನ್ಯಾಯಮೂರ್ತಿಗಳಾದ ಅಜಯ್ ಗಡ್ಕರಿ ಹಾಗೂ ಮಿಲಿಂದ್ ಜಾಧವ್ ಅವರನ್ನು ಒಳಗೊಂಡ ಪೀಠ ಜ್ಯೋತಿ ಜಗತಾಪ್ ಅವರ ವಿರುದ್ಧ ಎನ್ಐಎ ದಾಖಲಿಸಿದ ಪ್ರಕರಣ ಮೇಲ್ನೋಟಕ್ಕೆ ಸತ್ಯವಾದುದು ಎಂದು ಅಭಿಪ್ರಾಯಿಸಿತು ಹಾಗೂ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.
ತಾನು ಸಮಾಜದ ತಳಸ್ತರಕ್ಕೆ ಸೇರಿದ ಕಲಾವಿದೆ. ಸರಕಾರೇತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಪ್ರಕರಣಕ್ಕೆ ಸಂಬಂಧಿಸಿ ಪುಣೆ ಪೊಲೀಸರು ಸಲ್ಲಿಸಿದ ಮೊದಲ ಆರೋಪ ಪಟ್ಟಿಯಲ್ಲಿ ತನ್ನ ಹೆಸರಿಲ್ಲ ಎಂದು ಜ್ಯೋತಿ ಜಗತಾಪ್ ಅವರು ದೂರಿನಲ್ಲಿ ಹೇಳಿದ್ದಾರೆ.
Next Story





