Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಉಕ್ರೇನ್: ರಶ್ಯದ ವಾಯುದಾಳಿ ಇನ್ನಷ್ಟು...

ಉಕ್ರೇನ್: ರಶ್ಯದ ವಾಯುದಾಳಿ ಇನ್ನಷ್ಟು ತೀವ್ರ; ವಿದ್ಯುತ್ ಪೂರೈಕೆ ಅಸ್ತವ್ಯಸ್ತ

ವಾರ್ತಾಭಾರತಿವಾರ್ತಾಭಾರತಿ17 Oct 2022 10:47 PM IST
share
ಉಕ್ರೇನ್: ರಶ್ಯದ ವಾಯುದಾಳಿ ಇನ್ನಷ್ಟು ತೀವ್ರ; ವಿದ್ಯುತ್ ಪೂರೈಕೆ ಅಸ್ತವ್ಯಸ್ತ

ಕೀವ್, ಅ.17: ಒಂದು ವಾರದ ಹಿಂದೆ ರಶ್ಯದ ಸರಣಿ ಕ್ಷಿಪಣಿ ದಾಳಿಯಿಂದ ನಲುಗಿದ್ದ ಉಕ್ರೇನ್ ರಾಜಧಾನಿ  ಕೀವ(Kiev) ನಲ್ಲಿ ಸೋಮವಾರ ರಶ್ಯದ ತೀವ್ರ ವಾಯುದಾಳಿ ಹಾಗೂ  ಹಲವು ಸ್ಫೋಟಗಳು ಸಂಭವಿಸಿದ್ದು ನೂರಕ್ಕೂ ಅಧಿಕ ಗ್ರಾಮಗಳು ವಿದ್ಯತ್ ಸಂಪರ್ಕ ಕಳೆದುಕೊಂಡಿದೆ ಎಂದು ವರದಿಯಾಗಿದೆ.

ಸೋಮವಾರ ಬೆಳಿಗ್ಗೆ 6:35ರಿಂದ 6:58 ಗಂಟೆಯ ಮಧ್ಯೆ 3 ಭಾರೀ ಸ್ಫೋಟ ಸಂಭವಿಸಿದ್ದು ತಕ್ಷಣ ವಾಯುದಾಳಿಯ ಎಚ್ಚರಿಕೆ ನೀಡುವ ಸೈರನ್ ಮೊಳಗಿದೆ. ಒಂದು ಸ್ಫೋಟವು ಕೀವ್ನ ಶೆವ್ಚೆಂಕಿವಿಸ್ಕಿ ಜಿಲ್ಲೆಯಲ್ಲಿ ಸಂಭವಿಸಿದೆ. ಜನತೆಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು ಬಾಂಬ್ ದಾಳಿ ನಿರೋಧಕ ಶೆಲ್ಟರ್ನಲ್ಲಿ ಆಶ್ರಯ ಪಡೆಯಲು ಸೂಚಿಸಲಾಗಿದೆ ಎಂದು ಕೀವ್ನ ಮೇಯರ್ ವಿಟಾಲಿ ಕ್ಲಿಷ್ಕೊ ಹೇಳಿದ್ದಾರೆ.

ಅಕ್ಟೋಬರ್ 10ರಂದು ರಶ್ಯವು ಉಕ್ರೇನ್ ಮೇಲೆ ಕ್ಷಿಪಣಿ ದಾಳಿಯ ಮಳೆ ಸುರಿಸಿದ್ದು ದಾಳಿಯಲ್ಲಿ ಕನಿಷ್ಟ 19 ಮಂದಿ ಮೃತಪಟ್ಟು ಇತರ 105 ಮಂದಿ ಗಾಯಗೊಂಡಿದ್ದರು. ಅಕ್ಟೋಬರ್ 11ರಂದು ಪಶ್ಚಿಮ ಉಕ್ರೇನ್ನ ಇಂಧನ ಸ್ಥಾವರಗಳನ್ನು ಗುರಿಯಾಗಿಸಿ ರಶ್ಯದ ವಾಯುದಾಳಿ ಮುಂದುವರಿದಿತ್ತು.

ಸೋಮವಾರ ರಶ್ಯದ ದಾಳಿಯಿಂದ ಹಲವು ಸ್ಫೋಟಗಳು ಸಂಭವಿಸಿದ್ದು ಮೂರು ಪ್ರಾಂತಗಳ ಪ್ರಮುಖ ಮೂಲಸೌಕರ್ಯ ವ್ಯವಸ್ಥೆಯನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ದೇಶದಾದ್ಯಂತ ನೂರಾರು ಗ್ರಾಮಗಳು ಹಾಗೂ ಹಳ್ಳಿಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ ಎಂದು ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಗಲ್ ಹೇಳಿದ್ದಾರೆ.

ರಶ್ಯದ ಭಯೋತ್ಪಾದಕರು ಉಕ್ರೇನ್ನ 3 ಪ್ರಾಂತದ ಇಂಧನ ಮೂಲಸೌಕರ್ಯದ ಮೇಲೆ ಮತ್ತೊಮ್ಮೆ ದಾಳಿ ನಡೆಸಿದ್ದು ನೂರಾರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದವರು ಹೇಳಿದ್ದಾರೆ. 

ಈ ಮಧ್ಯೆ, ಸೋಮವಾರ ಹೇಳಿಕೆ ನೀಡಿರುವ ರಶ್ಯ ಸೇನೆ, ಉಕ್ರೇನ್‌ ನಾದ್ಯಂತ ಮಾರಣಾಂತಿಕ ಕ್ಷಿಪಣಿ ದಾಳಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡ ಬಳಿಕ, ಉದ್ದೇಶಿತ ಗುರಿಗೆ ನಡೆಸಿದ ದಾಳಿ ಯಶಸ್ವಿಯಾಗಿದೆ ಎಂದಿದೆ. ರಶ್ಯದ ಸೇನೆ ದೀರ್ಘ ಶ್ರೇಣಿಯ ನಿಖರ ದಾಳಿಯ ಸಾಮಥ್ರ್ಯವಿರುವ ಶಸ್ತ್ರಗಳೊಂದಿಗೆ ಉದ್ದೇಶಿತ ಗುರಿಗೆ ಅಪ್ಪಳಿಸಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.

ಕೀವ್ ಸೇರಿದಂತೆ ಉಕ್ರೇನ್ನ ಪ್ರಮುಖ ನಗರಗಳ ಮೇಲೆ ರಶ್ಯ ನಡೆಸುತ್ತಿರುವ ದಾಳಿಯನ್ನು ಉಕ್ರೇನ್ನಲ್ಲಿನ ಅಮೆರಿಕ ರಾಯಭಾರಿ ಕಚೇರಿ ಖಂಡಿಸಿದ್ದು , ರಶ್ಯದ ಹತಾಶ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿರುವ ಉಕ್ರೇನ್ ಜನತೆಯೊಂದಿಗೆ ತಾನು ನಿಲ್ಲುವುದಾಗಿ ಹೇಳಿದೆ.

37 ಡ್ರೋನ್ ಗಳ ನಾಶ: ಉಕ್ರೇನ್ (37 drones destroyed: Ukraine)

ರವಿವಾರ ಸಂಜೆಯಿಂದ ರಶ್ಯದ 37 ಡ್ರೋನ್ಗಳನ್ನು ನಾಶಗೊಳಿಸಲಾಗಿದೆ. ಅಂದರೆ, ರಶ್ಯದ ದಾಳಿಯಲ್ಲಿ ಒಳಗೊಂಡಿದ್ದ 85%ದಷ್ಟು ಡ್ರೋನ್ಗಳನ್ನು ತಮ್ಮ ಸೇನೆ ಹೊಡೆದುರುಳಿಸಿದೆ ಎಂದು ಉಕ್ರೇನ್ ವಾಯುಪಡೆಯ ವಕ್ತಾರ ಯೂರಿಯ್ ಇನ್ಹಾಟ್ ಸೋಮವಾರ ಹೇಳಿದ್ದಾರೆ.

ನಮ್ಮ ವಾಯುರಕ್ಷಣಾ ವ್ಯವಸ್ಥೆ ಮಾಡಿರುವ ಉತ್ತಮ ಕೆಲಸ ಇದಾಗಿದ್ದು ಭವಿಷ್ಯದಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಲಿದೆ. ಎಲ್ಲಾ ಡ್ರೋನ್ಗಳೂ ದಕ್ಷಿಣದಿಂದ ಉಕ್ರೇನ್ನತ್ತ ಹಾರಿವೆ ಎಂದವರು ಮಾಹಿತಿ ನೀಡಿದ್ದಾರೆ.

ಯುದ್ಧ ಉಲ್ಬಣದ ಬಗ್ಗೆ  ವಿಶ್ವಸಂಸ್ಥೆ ಕಳವಳ(37 Dronesh Desmoed: Ukraine)

ಉಕ್ರೇನ್ನಲ್ಲಿನ ಯುದ್ಧ ಉಲ್ಬಣಗೊಂಡಿರುವ ವರದಿ ಅತ್ಯಂತ ಕಳವಳಕಾರಿ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೈಕಮಿಷನರ್ ಪ್ರತಿಕ್ರಿಯಿಸಿದ್ದಾರೆ.

ಯುದ್ಧ ಉಲ್ಬಣಗೊಂಡಿರುವುದು ನಮ್ಮನ್ನು ವ್ಯಾಕುಲಗೊಳಿಸಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ನೂತನ ಹೈಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ವೋಕರ್ ಟರ್ಕ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ನಾಗರಿಕ ನೆಲೆಗಳು, ನಾಗರಿಕರು ದಾಳಿಯ ಗುರಿಯಾಗದಂತೆ ಎಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯವಾಗಿದೆ. ಅತ್ಯಂತ ಜನನಿಬಿಡ ನಗರ ಪ್ರದೇಶಗಳಲ್ಲಿ ಖಂಡಿತಾ ಇದು ಸುಲಭವಲ್ಲ. ಅಂತರಾಷ್ಟ್ರೀಯ ನಿಯಮವನ್ನು ಗೌರವಿಸುವುದು ಮತ್ತು ಸಂಘರ್ಷದ ತೀವ್ರತೆಯನ್ನು ಕಡಿಮೆಗೊಳಿಸುವುದು ಈಗಿನ ಅಗತ್ಯವಾಗಿದೆ. ಅಂತಿಮವಾಗಿ ಇದು ಯುದ್ಧದಲ್ಲಿ ಭಾಗಿಯಾಗಿರುವ ಮಾನವರ ಕುರಿತ ವಿಷಯವಾಗಿದೆ ಮತ್ತು ಅವರನ್ನು ರಕ್ಷಿಸಬೇಕಾಗಿದೆ ಎಂದು ವೋಕರ್ ಟರ್ಕ್ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ .

share
ವಾರ್ತಾಭಾರತಿ
ವಾರ್ತಾಭಾರತಿ
Next Story
X