ದೇಶದಲ್ಲಿ ಒಮಿಕ್ರಾನ್ನ ನೂತನ ಉಪ ಪ್ರಬೇಧ ಬಿಎಫ್.7 ಪತ್ತೆ

PTI
ಹೊಸದಿಲ್ಲಿ, ಅ.17: ದೇಶದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ನಡುವೆ ಅತಿ ಹೆಚ್ಚು ಸಾಂಕ್ರಾಮಿಕವಾಗಿರುವ ಒಮಿಕ್ರಾಮನ್ನ ನೂತನ ಉಪ ಪ್ರಬೇಧ ಬಿಎಫ್.7 ಪತ್ತೆಯಾಗಿದೆ. ಬಿಎಫ್.7ನ ಮೊದಲ ಪ್ರಕರಣ ಗುಜರಾತ್ನ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದಲ್ಲಿ ಪತ್ತೆಯಾಗಿದೆ ಎಂದು ಕೆಲವು ವರದಿಗಳು ಹೇಳಿವೆ. ಈ ನೂತನ ಒಮಿಕ್ರಾನ್ ಪ್ರಬೇಧ ತೀವ್ರ ಸಾಂಕ್ರಾಮಿಕ ಹಾಗೂ ಹೆಚ್ಚು ಪ್ರಸರಣವಾಗುತ್ತದೆ ಎಂದು ಪರಿಗಣಿಸಲಾಗಿದೆ.
ಒಮಿಕ್ರಾನ್ ಉಪ ಪ್ರಬೇಧಗಳಾಗಿರುವ ಬಿಎ.5.1.7 ಹಾಗೂ ಬಿಎಫ್.7 ಮಂಗೋಲಿಯಾ ವಲಯದಲ್ಲಿ ಕಂಡು ಬಂದಿತ್ತು. ಅನಂತರ ಇದು ಜಗತ್ತಿನ ಇತರ ಭಾಗಗಳಿಗೆ ಹರಡುತ್ತಿದ್ದು, ಆತಂಕ ಸೃಷ್ಟಿಸಿದೆ. ಚೀನಾದಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿಂದೆ ಒಮಿಕ್ರಾನ್ ಪ್ರಬೇಧಗಳಾದ ಬಿಎಫ್.7 ಹಾಗೂ ಬಿಎ.5.1.7 ಇದೆ ಎಂದು ವರದಿ ಹೇಳಿದೆ. ಆದರೆ, ಹಬ್ಬಗಳು ಬರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಹಾಗೂ ಕೋವಿಡ್ಗೆ ಸೂಕ್ತ ನಡವಳಿಕೆ ಅನುಸರಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
Next Story





