ಜಪಾನ್: ಯುನಿಫಿಕೇಷನ್ ಚರ್ಚ್ ಬಗ್ಗೆ ತನಿಖೆಗೆ ಆದೇಶ

Photo : NDTV
ಟೋಕಿಯೊ, ಅ.17: ಮಾಜಿ ಪ್ರಧಾನಿ ಶಿಂಝೊ ಅಬೆ (Shinzo Abe) ಹತ್ಯೆಯ ಬಳಿಕ ಯುನಿಫಿಕೇಷನ್ ಚರ್ಚ್(Unification Church) ಪಂಥದ ಕಾರ್ಯವೈಖರಿ ಕುರಿತು ಪರಿಶೀಲನೆ ಮುಂದುವರಿಸಿರುವ ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ(Fumio Kishida), ಈ ಪಂಥದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.
ಅಬೆ ಹತ್ಯೆಯ ಆರೋಪಿ ಯುನಿಫಿಕೇಷನ್ ಚರ್ಚ್ ಬಗ್ಗೆ ಅಸಮಾಧಾನದಿಂದ ಪ್ರೇರೇಪಿಸಲ್ಪಟ್ಟಿದ್ದ ಎಂಬ ವರದಿಯ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. `ಪ್ಯಾಮಿಲಿ ಫೆಡರೇಷನ್ ಫಾರ್ ವರ್ಲ್ಡ್ ಪೀಸ್ ಆ್ಯಂಡ್ ಯುನಿಫಿಕೇಷನ್' (``Family Federation for World Peace and Unification'')ಎಂಬ ಅಧಿಕೃತ ಹೆಸರಿನ ಈ ಸಂಘಟನೆ, ಭಾರೀ ದೇಣಿಗೆ ನೀಡುವಂತೆ ಸದಸ್ಯರನ್ನು ಒತ್ತಾಯಿಸುತ್ತಿರುವ ಆರೋಪವಿದೆ. ಈ ಸಂಘಟನೆ ಸಾರ್ವಜನಿಕ ಕಲ್ಯಾಣಕ್ಕೆ ಹಾನಿ ಮಾಡಿದೆಯೇ ಅಥವಾ ಧಾರ್ಮಿಕ ಗುಂಪಿನ ಸ್ಥಾನಮಾನದ ವಿರುದ್ಧವಾಗಿ ಕೃತ್ಯಗಳನ್ನು ನಡೆಸಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸರಕಾರದ ಮೂಲಗಳು ಹೇಳಿವೆ.
Next Story